








ಬೆಳ್ತಂಗಡಿ: ರಾಜ್ಯ ಸರಕಾರ ನೂತನವಾಗಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ರಚಿಸಿದ್ದು ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಹಿಂದೆ ಪದ್ಮನಾಭ ಸಾಲಿಯಾನ್ ಅವರು ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅದ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಅವಧಿ ಮುಗಿದ ಹಿನ್ನಲೆಯಲ್ಲಿ ಈ ನೂತನ ಸಮಿತಿಯ ಅಧ್ಯಕ್ಷರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ನೇಮಕಗೊಂಡಿದ್ದಾರೆ. ಅಬ್ದುಲ್ ರಹಿಮಾನ್ ಲಾಯಿಲ, ಮಹಮ್ಮದ್ ಆರೀಸ್ ಮದ್ದಡ್ಕ, ಸುಕೇಶ್ ಕೆ. ಮಾಲಾಡಿ, ವಿನೋದ್ ಡಿ ಸೋಜ ಬದ್ಯಾರ್, ಎಮ್ ಸೂರ್ಯ ಪ್ರಕಾಶ ಧರ್ಮಸ್ಥಳ, ಮೋಹನ್ ಕುಮಾರ್ ಬಿ.ಎ., ಜೋಸೆಪ್ ಕೆ.ಜೆ. ಪುದುವೆಟ್ಟು, ಸುಪ್ರಿಯಾ ಡಿಸೋಜ ಕರಂಬಾರು, ಸುಧೀರ್ ಕುಮಾರ್ ಶೆಟ್ಟಿ ಮಚ್ಚಿನ, ಮುನಿರಾಜ್ ಜೈನ್ ನಾರಾವಿ, ಪುಷ್ಪಲತ ಶೆಟ್ಟಿ, ರವಿ ಇಂದಬೆಟ್ಟು, ಸಚಿನ್ ದೇವಾಡಿಗ ಗರ್ಡಾಡಿ ಮತ್ತು ವಿನಯ್ ಕುಮಾರ್ ಎಮ್ ಕರಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.









