






ಬೆಳ್ತಂಗಡಿ: ತಾಲೂಕಿನ ಜನತೆಗೆ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಒಟ್ಟು ರೂ. 674.47 ಕೋಟಿ ರೂ ಜಮೆ ಮಾಡಿಸುವ ಮೂಲಕ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಳ್ಳಲು ಸಂಪೂರ್ಣ ಸಹಕಾರ ನೀಡಿದವರಿಗೆ ಕೃತಜ್ಞತೆಗಳು ಎಂದು ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ. ಪದ್ಮನಾಭ ಸಾಲ್ಯಾನ್ ಹೇಳಿದರು.
ಅವರು ಕರ್ನಾಟಕ ಸರಕಾರದ ಸೂಚನೆಯಂತೆ ಅಧಿಕಾರದ ಮುಕ್ತಾಯದ ಹಿನ್ನಲೆಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಲು ಅ.10ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅವರು ಕರ್ನಾಟಕ ಸರಕಾರ 5 ಅದ್ಭುತ ಯೋಜನೆಗಳನ್ನು ರಾಜ್ಯಕ್ಕೆ ಪರಿಚಯಿಸಿ ತಕ್ಷಣದಿಂದ ಜಾರಿಗೊಳಿಸಿ ಜನರ ಬದುಕಿಗೆ ಹೊಸ ಭರವಸೆಯನ್ನು ತಂದಿದೆ. ಪ್ರತೀ ಕುಟುಂಬದ ಗ್ರಹಿಣಿಯರ ಕೈ ಹಿಡಿದು ಗೃಹಲಕ್ಷ್ಮೀ ಯೋಜನೆ, ಮಹಿಳೆಯರ ಹೆಗಲ ಭಾರ ಇಳಿಸಿ ಸ್ವಾವಲಂಬನೆಯಿಂದ ಬದುಕು ಬದಲಾಯಿಸಿದ ಯೋಜನೆ, ಹಸಿವು ಮುಕ್ತ ಕರ್ನಾಟಕಕ್ಕೆ ಅನ್ನಭಾಗ್ಯ ಯೋಜನೆ, ಗೃಹಜ್ಯೋತಿ, ಶಕ್ತಿ. ಯುವನಿಧಿ ಈ ಎಲ್ಲಾ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡು ಬರುವಲ್ಲಿ ಅಧ್ಯಕ್ಷರೊಂದಿಗೆ ಸಂಪೂರ್ಣ ಸಹಕಾರ ನೀಡಿದ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆಗಳು ಎಂದರು.


ಪ್ರತಿ ಶಿಬಿರಗಳ ಸಭೆಗಳ ವಿಚಾರಗಳನ್ನು ಜನತೆಗೆ ತಲುಪಿಸುತ್ತಿದ್ದ ಪತ್ರಿಕಾ ಮಾಧ್ಯಮ, ದೃಶ್ಯಮಾಧ್ಯಮದವರಿಗೆ, ಎಲ್ಲಾ ಕಾರ್ಯಗಳ ಬಗ್ಗೆ ಸಲಹೆ ಹಾಗೂ ತಾಲೂಕಿನ ಎಲ್ಲಾ ಇಲಾಖೆಗಳನ್ನು ಸಮನ್ವಯದೊಂದಿಗೆ ಈ ಸಮಿತಿಯ ಕಾರ್ಯದರ್ಶಿಯವರಾದ, ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ರವರಿಗೆ ತಾಲೂಕು, ನೋಡೆಲ್ ಅಧಿಕಾರಿಯಾದ ಹೆರಾಲ್ಡ್ ಸಿಕ್ವೆರಾ ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿಯವರಿಗೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸಿದ ಕಾಂಗ್ರೆಸ್ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೂ ಎಲ್ಲರಿಗೂ ಧನ್ಯವಾದಗಳು ಎಂದರು.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ: ಇದುವರೆಗೂ ಪಂಚಗ್ಯಾರಂಟಿ ಯೋಜನೆಯಲ್ಲಿ ಗೃಹಲಕ್ಷ್ಮೀ ಯೋಜನೆಯ 32 ಕಂತುಗಳಲ್ಲಿ 315.39, 4400, ಗೃಹಜ್ಯೋತಿಯಲ್ಲಿ 141.13.72.541, ಅನ್ನಭಾಗ್ಯದಲ್ಲಿ 55, 49,55.540, ಶಕ್ತಿಯೋಜನೆಯಲ್ಲಿ 123.10.96.528, ಯುವನಿಧಿಯಲ್ಲಿ 3.33.58.500 ರೂ. ಮೊತ್ತ ಜಮೆಯಾಗಿದ್ದು ಒಟ್ಟಿನಲ್ಲಿ ಈ ಮೂರು ವರ್ಷದಲ್ಲಿ ತಾಲೂಕಿಗೆ 674.4727.109 ರೂ. ಜಮೆಯಾಗಿ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕು ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಪದ್ಮನಾಭ ಸಾಲ್ಯಾನ್ ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ನೇಮಿರಾಜ್ ಕಿಲ್ಲೂರು, ಸೌಮ್ಯ ಲಾಯಿಲ, ಮೆರಿಟಾ ಪಿಂಟೊ, ಶರೀಫ್ ಸಬರಬೈಲು ಮತ್ತು ವೀರಪ್ಪಮೊಯ್ಲಿ ಬಂಗಾಡಿ ಉಪಸ್ಥಿತರಿದ್ದರು.









