ವೇತನ ಪಾವತಿಯಾಗದೇ ಇದ್ದರೆ ತಾಲೂಕು ಕಚೇರಿ ಎದುರು ಅನಿರ್ದಿಷ್ಟ ಧರಣಿ-ಅಕ್ಷರ ದಾಸೋಹ ನೌಕರರ ಸಮಾವೇಶದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಎಂ. ಭಟ್ ಎಚ್ಚರಿಕೆ

0

ಬೆಳ್ತಂಗಡಿ: ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ತಾಯಂದಿರಿಗೆ ಸರಕಾರ ನೀಡುವ ರೂ. ೪,೬೦೦ ವೇತನವನ್ನೂ ಕಳೆದ ೩ ತಿಂಗಳಿಂದ ನೀಡದೆ ಸತಾಯಿಸುವ ಸರಕಾರಗಳ ಧೋರಣೆಯ ವಿರುದ್ಧ ಯುವಜನರನ್ನು ಸೇರಿಸಿ ಹೊರಾಟ ನಡೆಸಲು ನಮಗೆ ಸಾಧ್ಯವಾಗಬೇಕು ಎಂದು ಸಿಐಟಿಯು ದ.ಕ. ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು. ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನಡೆದ ಬೆಳ್ತಂಗಡಿ ತಾಲೂಕು ಅಕ್ಷರ ದಾಸೋಹ ನೌಕರರ ಸಮಾವೇಶವನ್ನುzಶಿಸಿ ಮಾತನಾಡಿದ ಅವರು ಕೇಂದ್ರ ಸರಕಾರ ನೀಡುವ ಮಾಸಿಕ ರೂ ೧,೦೦೦ವನ್ನೂ ಬಿಡುಗಡೆ ಮಾಡಿಲ್ಲ ಎಂದು ರಾಜ್ಯ ಸರಕಾರ ಜುಲೈ ತಿಂಗಳಿನ ೩,೬೦೦ ವೇತನ ಮಾತ್ರ ನೀಡಿ ವಂಚಿಸಿದೆ. ಹಿಂದುಗಳ ಉದ್ಧಾರ ಮಾಡುವ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ದುಡಿದು ಬದುಕುವ ಹಿಂದುಗಳ ಸಹಾಯಕ್ಕೂ ಬರುತ್ತಿಲ್ಲ. ಮಹಿಳೆಯರಿಗೆ ಉಚಿತ ನೀಡಿ ಮಹಿಳಾ ಸಬಲೀಕರಣ ಮಾಡುತ್ತೇವೆ ಎನ್ನುವ ರಾಜ್ಯದ ಕಾಂಗ್ರೆಸ್ ಸರಕಾರ ದುಡಿದು ಬದುಕು ಮಹಿಳೆಯರ ಸಂಬಳ ನೀಡುತ್ತಿಲ್ಲ ಎಂದಾದರೆ ಈ ಎರಡೂ ಸರಕಾರಗಳು ನಮ್ಮ ಬದುಕಿನ ಏಳಿಗೆಯ ವಿರೋಧಿಗಳು ಎಂಬುದು ಸ್ಪಷ್ಟ ಎಂದು ಹೇಳಿದರು.
ಹೋರಾಟದ ಯಶಸ್ಸಿಗೆ ದುಡಿಯಲು ನಿರ್ಧಾರ: ರಾಜ್ಯ ಸರಕಾರ ಗ್ಯಾರೆಂಟಿ ಯೋಜನೆಯಡಿ ಭರವಸೆ ನೀಡಿದ ಮಾಸಿಕ ರೂ. ೭,೦೦೦ ವೇತನವನ್ನು ಅಧಿಕಾರಕ್ಕೆ ಬಂದು ೩ ವರ್ಷ ಕಳೆದರೂ ನೀಡಿಲ್ಲ ಎಂದು ಹೇಳಿದ ಬಿ.ಎಂ.ಭಟ್ ಅವರು ಕೇಂದ್ರದ ಬಿಜೆಪಿ ಸರಕಾರ ೨೦೧೪ರಿಂದ ೧ ರೂ ಸಂಬಳ ಏರಿಕೆ ಮಾಡಿಲ್ಲ. ಜುಲೈ ತಿಂಗಳಿಂದ ಬಾಕಿ ಇರುವ ಎಲ್ಲಾ ವೇತನ ಪಾವತಿಯಾಗದೇ ಇದ್ದರೆ ನವೆಂಬರ್ ೨ರಿಂದ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಅನಿರ್ದಿಷ್ಟ ಕಾಲ ಧರಣಿ ನಡೆಸಲಾಗುವುದು ಎಂದು ಹೇಳಿದರು. ಅಕ್ಷರ ದಾಸೋಹ ನೌಕರರ ಕನಿಷ್ಟ ವೇತನಕ್ಕೆ ಆಗ್ರಹಿಸಿ ಡಿ. ೧ರಂದು ನಡೆಯಲಿರುವ ಡೆಲ್ಲಿ ಚಲೊ ಹೋರಾಟದ ಯಶಸ್ವಿಗೆ ದುಡಿಯಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಚಂದ್ರಾವತಿ ಮತ್ತು ಸಿಐಟಿಯು ಜಿಲ್ಲಾ ಸಮಿತಿ ಸದಸ್ಯೆ ಜಯಶ್ರೀ ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಸಂಘದ ಜಿಲ್ಲಾ ಸಮಿತಿಗೆ ಆಯ್ಕೆಯಾದ ಈಶ್ವರಿ ಪದ್ಮುಂಜ, ಸುನೀತ ಹಾಗೂ ವಿನೋದ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಸಂಘದ ಕಾರ್ಯದರ್ಶಿ ವಿನೋದ ಸ್ವಾಗತಿಸಿ ವಂದಿಸಿದರು. ನ.೨ರ ಮೊದಲು ಸಂಬಳ ಬಾರದೇ ಇದ್ದರೆ ತಾಲೂಕಿನ ಅಕ್ಷರದಾಸೋಹ ನೌಕರರು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಅನಿರ್ಧಿಷ್ಟಕಾಲ ದರಣಿ ನಡೆಸಲಿzವೆ ಎಂಬ ವಿಚಾರವನ್ನು ಸಭೆಯ ಬಳಿಕ ನಿಯೋಗದ ಮೂಲಕ ತಾಲೂಕು ಪಂಚಾಯತು ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ನೀಡಿ ತಿಳಿಸಲಾಯಿತು.

LEAVE A REPLY

Please enter your comment!
Please enter your name here