







ತೆಕ್ಕಾರು: ಸುನ್ನಿ ಸ್ಟೂಡೆಂಟ್ ಫೆಡರೇಷನ್ (SSF) ರಾಷ್ಟ್ರೀಯ ಸಮಿತಿ ವತಿಯಿಂದ ಅ.3 ರಂದು ಚೆನ್ನೈನಲ್ಲಿ ನಡೆದ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದಲ್ಲಿ SSF ಸರಳಿಕಟ್ಟೆ ಸೆಕ್ಟರ್ ವ್ಯಾಪ್ತಿಯ ತೆಕ್ಕಾರು ಶಾಖೆಯ ಕಾರ್ಯಕರ್ತ ಶಮ್ಮಾಸ್ ಟಿ.ಕೆ ಜೂನಿಯರ್ ವಿಭಾಗದ ಪೆನ್ಸಿಲ್ ಚಿತ್ರಕಲೆ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.


ಈ ಹಳ್ಳಿಯ ಪ್ರತಿಭೆಯ ಸಾಧನೆ ನಮಗೆ ಹೆಮ್ಮೆ ತಂದಿದೆ. “ನಿರೀಕ್ಷೆಗಳ ನೀಲ ನಕ್ಷೆ” ಎಂಬ ಘೋಷವಾಕ್ಯದೊಂದಿಗೆ SSF ನಡೆಸುವ ಸಾಹಿತ್ಯೋತ್ಸವ ಶಾಖಾ ಮಟ್ಟದಿಂದ ಸೆಕ್ಟರ್, ಡಿವಿಷನ್, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದವರೆಗೆ ನಡೆಯುತ್ತಿದ್ದು, ಹಲವು ಯುವ ಪ್ರತಿಭೆಗಳು ಈ ಮೂಲಕ ಪರಿಚಯವಾಗುತ್ತಿದ್ದಾರೆ.
ಯುವ ಮನಸ್ಸುಗಳ ಪ್ರತಿಭೆ ಹೊರಹೊಮ್ಮಿಸಲು SSF ಇಂತಹ ವೇದಿಕೆ ನೀಡುತ್ತಿರುವುದು ಶ್ಲಾಘನೀಯ. SSF ಸಂಘಟನೆ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂತ್ವನ ಕಾರ್ಯಗಳ ಮೂಲಕ ಯುವ ಪೀಳಿಗೆಗೆ ದಾರಿದೀಪವಾಗಿದೆ.ಈ ಪ್ರತಿಭೆಯ ಸಾಧನೆ ಇನ್ನೂ ಯಶಸ್ವಿಯಾಗಲಿ, ಹೆತ್ತವರಿಗೆ ಹಾಗೂ ಊರಿಗೆ ಹೆಮ್ಮೆ ತರಲಿ ಎಂದು SSF ಸರಳಿಕಟ್ಟೆ ಸೆಕ್ಟರ್ ಸಮಿತಿ ಕೋಶಾಧಿಕಾರಿ ಸಿಹಾಬ್ ಬಾಗ್ಲೋಡಿ ಶುಭ ಹಾರೈಸಿದ್ದಾರೆ.









