







ಉಜಿರೆ;* ಇಂದು ಪ್ರತಿಯೊಂದು ಕೆಲಸದಲ್ಲೂ ಸ್ಪರ್ಧೆ ಇದೆ. ಆದ್ದರಿಂದ ನಾವು ಮಾಡುವ ಕೆಲಸಕ್ಕೆ ಹೆಚ್ಚು ಗಮನಕೊಟ್ಟು ಅದರಲ್ಲಿ ತನ್ನದೇ ಆದ ಹೊಸತನವನ್ನು, ವಿಶೇಷತೆಯನ್ನು ತರಬೇಕು ಎಂದು ಉಜಿರೆಯ ಸಂಧ್ಯಾ ಫ್ರೆಶ್ ಇದರ ಮಾಲಕಿ ಅರ್ಚನಾ ರಾಜೇಶ್ ಪೈ ಅಭಿಪ್ರಾಯಪಟ್ಟರು.


ಇವರು *ರುಡ್ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ*ಯಲ್ಲಿ 6 ದಿನಗಳ ಕಾಲ ನಡೆದ *ಉದ್ಯಮಶೀಲತಾ ಅಭಿವೃದ್ಧಿ*- *ಮದುಮಗಳ ಶೃಂಗಾರ* ತರಬೇತಿಯಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.ಮಹಿಳೆಯರು ಸಾಂಸಾರಿಕ ಬದುಕು ಮತ್ತು ವ್ಯವಹಾರಿಕ ಬದುಕನ್ನು ಸಮತೋಲನದಿಂದ ಕೊಂಡೊಯ್ಯಬೇಕಾಗುತ್ತದೆ. ಕಲಿತ ಕೌಶಲ್ಯವನ್ನು ಮನೆಯಲ್ಲೇ ಉಳಿಸದೆ, ಸ್ವಂತ ಬ್ಯೂಟಿ ಪಾರ್ಲರ್ ಆರಂಭಿಸಿ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಅವರು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರುಡ್ಸೆಟ್ ಸಂಸ್ಥೆ, ಉಜಿರೆಯ ನಿರ್ದೇಶಕರಾದ *ಸುನೀಲ್ ಜಿ. ನಾಯ್ಕ್* ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮವನ್ನು ಹಿರಿಯ ಉಪನ್ಯಾಸಕರಾದ *ಅಬ್ರಹಾಂ ಜೇಮ್ಸ್* ಅವರು ನಿರೂಪಿಸಿದರು, ಹಿರಿಯ ಉಪನ್ಯಾಸಕರಾದ * ಕರುಣಾಕರ್ ಜೈನ್* ಅವರು ಧನ್ಯವಾದ ಸಲ್ಲಿಸಿದರು. *ಕು. ರಮ್ಯಾ* ಅವರು ಪ್ರಾರ್ಥನೆ ಮಾಡಿದರು. ಶಿಬಿರಾರ್ಥಿಗಳಾದ *ಸೌಮ್ಯ ಪಿ.* ಮತ್ತು *ಶ್ವೇತಾ* ಅವರು ತರಬೇತಿಯ ಅನುಭವವನ್ನು ಹಂಚಿಕೊಂಡರು









