








ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಪಪ್ರಚಾರ ಮತ್ತು ಕಪೋಲಕಲ್ಪಿತ ವದಂತಿಗಳನ್ನು ಹರಡುತ್ತಿದ್ದ ನಕಲಿ ಪ್ರೊಫೈಲ್‌ಗಳು ಮತ್ತು ಪೇಜ್‌ಗಳ ವಿರುದ್ಧ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸಂಸ್ಥೆ ಬೃಹತ್ ಡಿಜಿಟಲ್ ಕಾರ್ಯಾಚರಣೆ ನಡೆಸಿದೆ. ಮೆಟಾ ಬಿಡುಗಡೆ ಮಾಡಿರುವ ಸೋಷಿಯಲ್ ಮೀಡಿಯಾ ಆಕೌಂಟ್ ಟೇಕ್‌ಡೌನ್ ರಿಪೋರ್ಟ್ ಪ್ರಕಾರ ನಿಯಮ ಉಲ್ಲಂಘನೆ ಮತ್ತು ಅಪಪ್ರಚಾರದ ಆರೋಪದಡಿ ಫೇಸ್‌ಬುಕ್ ಹಾಗೂ ಇನ್‌ಸ್ಟ್ರಾಗ್ರಾಮ್‌ನ ಒಟ್ಟು ೪೮ ಖಾತೆಗಳನ್ನು ಸಂಪೂರ್ಣವಾಗಿ ಅಳಿಸಿ ಹಾಕಲಾಗಿದೆ. ಒಟ್ಟು ೨,೯೭.೫೧೯ ಫಾಲೋವರ್ಸ್ ಹೊಂದಿದ್ದ ಫೇಸ್‌ಬುಕ್ ಖಾತೆಗಳು ಮತ್ತು ಒಟ್ಟು ೨೮,೭೩೨ ಫಾಲೋವರ್ಸ್ ಹೊಂದಿದ್ದ ಇನ್‌ಸ್ಟ್ರಾಗ್ರಾಮ್‌ನ ೧೧ ಖಾತೆಗಳನ್ನು ಮೆಟಾ ಸಂಸ್ಥೆ ರದ್ದು ಪಡಿಸಿದೆ.
ವೀವ್ಸ್ ಹಾಗೂ ಲೈಕ್‌ಗಳಿಗಾಗಿ ಸುಳ್ಳು ಕಥೆಗಳನ್ನು ಹೆಣೆದು ಪ್ರಚಾರ ನಡೆಸುತ್ತಿದ ಆರೋಪದಡಿ ಹಲವು ಮುಂಚೂಣಿ ಖಾತೆಗಳಿಗೆ ಮೆಟಾ ಸಂಸ್ಥೆ ಶಾಶ್ವತ ಬೀಗ ಜಡಿದಿದೆ ಎಂದು ತಿಳಿದು ಬಂದಿದೆ.








