







ಚಾರ್ಮಾಡಿ: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಚಾರ್ಮಾಡಿ ಘಟಕದ ವತಿಯಿಂದ ವಿಶ್ವ ಹಿಂದೂ ಪರಿಷತ್ ಸ್ಥಾಪನ ದಿನಾಚರಣೆಯು ಸ್ಥಳೀಯ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮದಲ್ಲಿ ಚಾರ್ಮಾಡಿಯ ಪ್ರಗತಿಪರ ಕೃಷಿಕರು ಹಾಗೂ ಮುಂಡಾಜೆ ಸಿ.ಎ. ಬ್ಯಾಂಕ್ನ ಅಧ್ಯಕ್ಷ ಪ್ರಕಾಶ್ ನಾರಾಯಣ್ ರಾವ್ ಕೆ ಮಠದಮಜಲು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ವಿಶ್ವ ಹಿಂದೂ ಪರಿಷತ್ ಚಾರ್ಮಾಡಿ ಘಟಕದ ಉಪಾಧ್ಯಕ್ಷರಾದ ಪಂಚೇಶ್ ಪೊಂಗರದಡಿ ಉಪಸ್ಥಿತರಿದ್ದರು. ಸಹಸಂಯೋಜಕ ಯೋಗೀಶ್ ಕಾರ್ಯಕ್ರಮದ ವಿವರ ನೀಡಿದರು.
ರಾಜೇಶ್ ಬಾಂಗ್ಲಾಗುಡ್ಡೆ ಚಾರ್ಮಾಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಘಟಕ ಸಮಿತಿಯ ಸದಸ್ಯರು ಹಾಗೂ ಹಿಂದೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು









