







ಬೆಳ್ತಂಗಡಿ : ಬೆಳ್ತಂಗಡಿ ಸೀನಿಯರ್ ಛೇoಬರ್ ವತಿಯಿಂದ ಬೆಳ್ತಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ “SCI ಯೂತ್ ವಿಂಗ್” ಉದ್ಘಾಟನೆ, ಯೂತ್ ವಿಂಗ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದನೆ ಮತ್ತು ತರಬೇತಿ ಕಾರ್ಯಕ್ರಮ ಸೆ. 5ರಂದು ಕಾಲೇಜಿನ ಸಭಾಂಗಣದಲ್ಲಿ ಸೀನಿಯರ್ ಛೇ0ಬರ್ ಅಧ್ಯಕ್ಷ Snr PPF ಜಾನ್ ಅರ್ವಿನ್ ಡಿಸೋಜಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.



SCI ತರಬೇತಿ ವಿಭಾಗ ಹಾಗೂ ಯೂತ್ ಅಫೇರ್ಸ್ ನಿರ್ದೇಶಕ Snr PPF ಹುಸೇನ್ ಹೈಕಾಡಿ ಉದ್ಘಾಟಿಸಿ, ಪ್ರತಿಜ್ಞಾ ವಿಧಿಯನ್ನು ಭೋದಿಸಿ ತರಬೇತಿಯನ್ನೂ ನೀಡಿ ವಿದ್ಯಾರ್ಥಿಗಳು ಪಾಠ ದೊಂದಿಗೆ ನಾಯಕತ್ವದ ಗುಣಗಳನ್ನು ಈಗಲೇ ಕಲಿಯಬೇಕಾದರೆ ಇತರ ಚಟುವಟಿಕೆಗಳಲ್ಲೂ ಭಾಗವಹಿಸಿದರೆ ಮಾತ್ರ ಮುಂದೆ ರಾಷ್ಟ್ರದ ಸತ್-ಪ್ರಜೆಗಳಾಗಬಹುದು ಎಂದು ಕಿವಿ ಮಾತು ಹೇಳಿ ಶುಭಾಶಯಗಳನ್ನು ಕೋರಿದರು.ಮುಖ್ಯ ಅತಿಥಿಗಳಾಗಿ ಕಾಲೇಜು ಪ್ರಾಂಶುಪಾಲ ಸುಕುಮಾರ್ ಜೈನ್, ಯೂತ್ ವಿಂಗ್ ಸಂಚಾಲಕ ಪ್ರಾಧ್ಯಾಪಕ ಶೀನ ನಾಡೋಳಿ, Snr Csl ಪ್ರಮೋದ್ ಆರ್. ನಾಯಕ್’ ವೇದಿಕೆಯಲ್ಲಿ ಉಪಸ್ಥಿತರಿದ್ದರು .ಉಪಾಧ್ಯಕ್ಷ Snr PPF ಪುಷ್ಪರಾಜ್ ಶೆಟ್ಟಿ ಧ್ಯೇಯ ವಾಕ್ಯ ಉದ್ಘೋಷಿಸಿದರೆ, Snr PPF ವಿಲ್ಸನ್ ಗೊನ್ಸಾಲ್ವಿಸ್ ಉದ್ಘಾಟಕರ ಪರಿಚಯವನ್ನು ಮಾಡಿದರು.ಪೂರ್ವಾಧ್ಯಕ್ಷ Snr PPF ಲ್ಯಾನ್ಸಿ ಪಿರೇರಾ, ಸದಸ್ಯರಾದ Snr ಎಂ. ಆರ್. ಪ್ರಸನ್ನ ಹಾಜರಿದ್ದರು. ಕೋಶಾಧಿಕಾರಿಗಳಾದ Snr ಪದ್ಮಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿರು.









