







ಬೆಳ್ತಂಗಡಿ: ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಅವರು ವರ್ಗಾವಣೆಗೊಂಡಿದ್ದು, ಅವರ ಸ್ಥಾನಕ್ಕೆ ದಯಾಮತಿ ಎಂ. ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.


ಕಳೆದ ಮೂರು ವರ್ಷಗಳಿಂದ ಬೆಳ್ತಂಗಡಿ ತಾ.ಪಂ ನಲ್ಲಿ ಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಭವಾನಿ ಶಂಕರ್ ಅವರನ್ನು ಮೂಡುಬಿದಿರೆ ತಾ.ಪಂಗೆ ವರ್ಗಾವಣೆ ಮಾಡಲಾಗಿದೆ.ತೆರವಾದ ಬೆಳ್ತಂಗಡಿ ತಾ.ಪಂ ಸ್ಥಾನಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾ.ಪಂ ನಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ದಯಾಮತಿ ಎಂ ಅವರನ್ನು ನೇಮಕಗೊಳಿಸಲಾಗಿದೆ.









