ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಸಂಭ್ರಮ: ಯಶಸ್ವಿ ಸಮಾಲೋಚನಾ ಸಭೆ

0

ಅಳದಂಗಡಿ: ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಮಹೋತ್ಸವದ ನಿಮಿತ್ತ ಆ. 9 ರಂದು ಸಮಾಲೋಚನಾ ಸಭೆಯು ನಡೆಯಿತು.

​ಸಂಘದ 50 ವರ್ಷಗಳ ಸುದೀರ್ಘ ಸೇವೆ, ನಂಬಿಕೆ ಮತ್ತು ಸಾಧನೆಯ ಸ್ಮರಣೀಯ ಪಯಣವಾದ ‘ಸುವರ್ಣ ಸಂಭ್ರಮ’ವನ್ನು ಐತಿಹಾಸಿಕ ಹಾಗೂ ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಗೆ ಆಗಮಿಸಿದ ಎಲ್ಲಾ ಗೌರವಾನ್ವಿತ ಸದಸ್ಯರು ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು, ನೂತನ ಆಲೋಚನೆಗಳು ಹಾಗೂ ಮಾರ್ಗದರ್ಶನಗಳನ್ನು ಹಂಚಿಕೊಂಡಿದ್ದಾರೆ.​

ಈ ಕುರಿತು ಕೃತಜ್ಞತೆ ವ್ಯಕ್ತಪಡಿಸಿರುವ ಸಂಘದ ಅಧ್ಯಕ್ಷರಾದ ರಾಕೇಶ್ ಹೆಗಡೆ ಅವರು, ಸದಸ್ಯರ ಒಗ್ಗಟ್ಟು ಮತ್ತು ಸಕ್ರಿಯ ಭಾಗವಹಿಸುವಿಕೆ ಸಂಘದ ನಿಜವಾದ ಶಕ್ತಿ ಎಂದು ಬಣ್ಣಿಸಿದ್ದಾರೆ. ಮುಂಬರುವ ದಿನಗಳಲ್ಲಿ ನಡೆಯಲಿರುವ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುವಂತೆ ಅದ್ಧೂರಿಯಾಗಿ ಆಚರಿಸಲು ಎಲ್ಲರ ಸಹಕಾರವನ್ನು ಕೋರಿದ್ದಾರೆ.

LEAVE A REPLY

Please enter your comment!
Please enter your name here