ಆನೆ ದಂತ ಮಾರಾಟ ಯತ್ನ: ಪುದುವೆಟ್ಟಿನ ಶಶಾಂಕ್ ಸಹಿತ ಮೂವರ ಬಂಧನ

0

ಬೆಳ್ತಂಗಡಿ: ಆನೆದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಮಂಗಳೂರಿನ ಸಿಐಡಿ ಅರಣ್ಯ ಘಟಕದ ಸಿಬ್ಬಂದಿಗಳು ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ೪೨.೭ ಕೆಜಿ ತೂಕದ ಎರಡು ಆನೆದಂತ ಹಾಗೂ ಸಾಗಾಟಕ್ಕೆ ಬಳಸಿದ್ದ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು ನಗರದ ಪದವು ಗ್ರಾಮದ ಮಾರೋಳಿ ಜೋಡುಕಟ್ಟೆ ಬಳಿ ಗುರುವಾರ ಆನೆದಂತ ಮಾರಾಟ ಮಾಡಲು ಕೆಲವು ವ್ಯಕ್ತಿಗಳು ಸಂಚು ರೂಪಿಸಿದ್ದಾರೆ ಎಂದು ಸಿಐಡಿ ಅರಣ್ಯ ಘಟಕಕ್ಕೆ ಖಚಿತ ಲಭಿಸಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಆನೆ ದಂತಗಳನ್ನು ಮಾರಾಟ ಮಾಡಲು ಗ್ರಾಹಕರಿಗಾಗಿ ಕಾಯುತ್ತಿದ್ದ ಬೆಳ್ತಂಗಡಿ ತಾಲೂಕಿನ ಪುದುವೆಟ್ಟುವಿನ ಶಶಾಂಕ್, ಕೇರಳ ಮಂಜೇಶ್ವರದ ಅಬ್ದುಲ್ ಖಾದರ್ ಮತ್ತು ಮಂಗಳೂರು ಅತ್ತಾವರದ ಪ್ರಭಾಚಂದ್ರ ಎಂಬವರನ್ನು ಬಂಧಿಸಿದ್ದಾರೆ. ಮಡಿಕೇರಿ ಸಿಐಡಿ ಅರಣ್ಯ ಘಟಕದ ಎಸ್‌ಪಿ ಪವನ್ ನೆಟ್ಟೂರ್ ಅವರ ಮಾರ್ಗದರ್ಶನ ಮತ್ತು ಮಂಗಳೂರು ಸಿಐಡಿ ಅರಣ್ಯ ಮೊಬೈಲ್ ಘಟಕದ ಎಸ್‌ಐ ದಿಲೀಪ್ ಜಿ.ಆರ್. ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಜಯರಾಮ್ ಕೆ.ಟಿ, ಬಾಲಕೃಷ್ಣ ಕೆ.ಎಂ, ತಾರಾನಾಥ್ ಎಸ್ ಹಾಗೂ ಅಬ್ದುಲ್ ರೌಫ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here