






ಬೆಳ್ತಂಗಡಿ: ಲಾಲದಲ್ಲಿ ಕ್ರಿಕೆಟ್ ಆಡುವ ಸಂದರ್ಭ ನಡೆದ ವಾಗ್ವಾದ ನೆಪವಾಗಿಸಿ ಯುವಕನ ತಲೆಗೆ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಸಂಭವಿಸಿದೆ. ಆರೋಪಿಯನ್ನು ಬೆಳ್ತಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಕ್ಕೇನ ನಿವಾಸಿ ಆಸಿಫ್ (೩೬) ಗಾಯಗೊಂಡವರಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದು ರಜೆಯಲ್ಲಿ ಬಂದಿದ್ದ ಕಕ್ಕೇನ ನಿವಾಸಿ ಆರಿಫ್ (೨೫) ಆರೋಪಿ.


ಘಟನೆ ಹಿನ್ನಲೆ: ಲಾಯಿಲದ ಹಕೀಂ ಎಂಬರಿಗೆ ಸೇರಿದ ಜಾಗದಲ್ಲಿ ಮಾ.೨೭ರಂದು ಸ್ಥಳೀಯ ಯುವಕರು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಕ್ರಿಕೆಟ್ ಆಡಲು ಬಂದ ಕಕ್ಕೇನದ ಆರಿಫ್ ಎಂಬಾತ ರಿಯಾಜ್ ಎನ್ನುವವರ ಜತೆ ಜಗಳ ಮಾಡಿದ್ದ. ಈ ವೇಳೆ ಆಸಿಫ್ ಜಗಳ ಬಿಡಿಸಿದ್ದರು. ಇದೇ ವಿಚಾರವಾಗಿ ರಾತ್ರಿ ಆರಿಫ್ ಬೆದರಿಕೆ ಮೆಸೇಜ್ ಹಾಕಿದ್ದ. ಈ ಬಗ್ಗೆ ಮಾ.೨೯ರಂದು ಕ್ರಿಕೆಟ್ ಆಡಲು ಆರಿಫ್ ಬಂದ ವೇಳೆ ಆಸಿಫ್ ಪ್ರಶ್ನಿಸಿದ್ದಾರೆ. ಆಗ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಆರಿಫ್ ಮನೆಗೆ ಹೋಗಿ ಕತ್ತಿಯೊಂದಿಗೆ ಬಂದಾಗ ಆಸಿಫ್ ಅಲ್ಲಿಂದ ಓಡಲಾರಂಭಿಸಿದ್ದಾರೆ.
ಬೆನ್ನಟ್ಟಿ ಬಂದ ಆರಿಫ್ ಆಸಿಫ್‌ರ ತಲೆಗೆ ಕಡಿದು ಗಾಯಗೊಳಿಸಿದ್ದಾನೆ. ಇತರ ಯುವಕರು ಸ್ಥಳಕ್ಕೆ ಬಂದಾಗ ಆರಿಫ್ ತಪ್ಪಿಸಿಕೊಂಡಿದ್ದಾನೆ. ಬಳಿಕ ಆಸಿಫ್‌ರವರ ಕೊಲೆಗೆ ಯತ್ನಿಸಿದ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆರೀಫ್ ವಿರುದ್ಧ ಕಲಂ ೩೫೨,೩೫೧(೩),೧೦೯ ಬಿಎನ್‌ಎಸ್‌ನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರಿಫ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ವಿದೇಶದಲ್ಲಿ ಉದ್ಯೋಗದಲ್ಲಿದ್ದ ಆರಿಫ್ ಕೆಲವು ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದ ಎಂದು ತಿಳಿದು ಬಂದಿದೆ.









