






ಧರ್ಮಸ್ಥಳ : ಧರ್ಮಸ್ಥಳ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಇಸ್ರೋದಲ್ಲಿ ಹಿರಿಯ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿರುವ ಪಿ.ವಾಸುದೇವರಾವ್ ಆಗಮಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.



ಬಳಿಕ ಮಾತನಾಡಿದ ಅವರು ವಿಧ್ಯಾರ್ಥಿಗಳಿಗೆ ವಿಜ್ಞಾನ ದಿನಾಚರಣೆಯ ಕುರಿತು ಮಾಹಿತಿ ನೀಡಿದರು, ವಿಜ್ಞಾನದ ಅಗತ್ಯ,ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವದ ಅಗತ್ಯ, ರಾಕೆಟ್ಗಳ ಕಾರ್ಯವೈಖರಿ,ಬಳಿಕ ಇಸ್ರೋ ಎಂದರೇನು ಅದರ ಕಾರ್ಯವೈಖರಿಗಳ ಬಗ್ಗೆ ಮಾಹಿತಿಯನ್ನು ವಿವಿಧ ಉದಾಹರಣೆಗಳ ಮೂಲಕ ವಿವರಿಸಿದರು. ಅವರು ವಿಜ್ಞಾನಕ್ಕೆ ನೀಡಿದ ಸೇವೆಯನ್ನು ಮನಗಂಡು ಸನ್ಮಾನಿಸಲಾಯಿತು.ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಅದರಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಸಹ ನೀಡಲಾಯಿತು.
ಹಾಗೆಯೇ ವಿಜ್ಞಾನ ಪುಸ್ತಕಗಳ ಪ್ರದರ್ಶನವನ್ನು ಗ್ರಂಥಾಲಯದಲ್ಲಿ ಮಾಡಲಾಗಿತ್ತು.ಶಾಲಾ ವಿದ್ಯಾರ್ಥಿನಿ ಕುಮಾರಿ ಆರಾಧ್ಯ ಪಿ. ಜೋಷಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ. ವಿ. ಸ್ವಾಗತಿಸಿ ,ಕುಮಾರಿ ವೈಭವಿ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕಿ ಅನುಷಾ ಸ್ಪರ್ಧೆಯಲ್ಲಿ ವಿಜೇತರ ಪಟ್ಟಿಯನ್ನು ಓದಿದರು. ಕುಮಾರಿ ಸಮೀಕ್ಷಾ ಧನ್ಯವಾದ ಸಲ್ಲಿಸಿದರು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.









