ಅನಿಯಮಿತ ವಿದ್ಯುತ್ ಕಡಿತ ತಪ್ಪಿಸಲು ಬೆಳ್ತಂಗಡಿ ನಗರಕ್ಕೆ ಪ್ರತ್ಯೇಕ ಫೀಡರ್‌ ಅಳವಡಿಸಲು ಮನವಿ

0

ಬೆಳ್ತಂಗಡಿ: ಅನಿಯಮಿತವಾಗಿ ವಿದ್ಯುತ್ ಕಡಿತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ನಗರಕ್ಕೆ ಪ್ರತ್ಯೇಕ ಫೀಡ‌ರ್ ಅಳವಡಿಸುವ ಜತೆಗೆ ಗುರುವಾಯನಕೆರೆಯಿಂದ ಬೆಳ್ತಂಗಡಿ ನಗರಕ್ಕೆ ಪ್ರತ್ಯೇಕ ಯುಜಿ ಕೇಬಲ್ ಅಳವಡಿಸುವಂತೆ ಬೆಳ್ತಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರಿಗೆ ಮನವಿ ಮಾಡಲಾಯಿತು.

ಕಳೆದ ಹಲವು ದಶಕಗಳಿಂದ ಬೆಳ್ತಂಗಡಿಯ ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ವಿದ್ಯುತ್ ಬಳಕೆಯ ಮೂಲಕ ಮೆಸ್ಕಾಂಗೆ ಅಧಿಕ ಮೊತ್ತದ ಆದಾಯ ನೀಡುತ್ತಿದ್ದು, ಆದರೆ ಕಳೆದ ಕೆಲವು ಸಮಯಗಳಿಂದ ಬೆಳ್ತಂಗಡಿ ನಗರದಲ್ಲಿ ಅನಿಯಮಿತವಾಗಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಅಧಿಕ ಬಂಡವಾಳ ಹೂಡಿ ವ್ಯವಹಾರ ನಡೆಸುತ್ತಿದ್ದು, ಆದರೆ ವಿದ್ಯುತ್ ಕಡಿತದಿಂದ ಹೆಚ್ಚುವರಿಯಾಗಿ ಜನರೇಟರ್ ಡೀಸೆಲ್ ಸೇರಿದಂತೆಇತರ ಅಧಿಕ ಖರ್ಚುಗಳಿಂದ ಆರ್ಥಿಕ ಹೊರೆ ಎದುರಾಗುತ್ತಿದೆ.

ಈ ಹಿಂದೆ ಇಡೀ ದಿನ ವಿದ್ಯುತ್ ಕಡಿತವಿದ್ದರೆ ಮೊದಲೇ ಪ್ರಕಟನೆ ಕೊಡಲಾಗುತ್ತಿದ್ದು, ಆದರೆ ಅದು ಈಗ ನಿಂತು ಹೋಗಿದೆ. ಬಹಳ ಮುಖ್ಯವಾಗಿ ಬೆಳಗ್ಗಿನ ಹೊತ್ತು ಒಂದು ಗಂಟೆಯಲ್ಲಿ ಹಲವು ಬಾರಿ ವಿದ್ಯುತ್ ಕಡಿತಗೊಳ್ಳುವುದರಿಂದ ಉಪಕರಣಗಳಿಗೆ ಹಾನಿಯಾಗುತ್ತಿದೆ. ಉಜಿರೆ ಪ್ರದೇಶದಲ್ಲಿ ಕಾಮಗಾರಿ ನಡೆಯಬೇಕಿದ್ದರೂ, ಬೆಳ್ತಂಗಡಿ ನಗರದ ವಿದ್ಯುತ್ ಕಡಿತ ಮಾಡಬೇಕಾದ ಸ್ಥಿತಿ ಇದೆ.

ಬೆಳ್ತಂಗಡಿ ನಗರಕ್ಕೆ ಪ್ರತ್ಯೇಕ ಫೀಡರ್ ಅಳವಡಿಸುವ ಜತೆಗೆ ಗುರುವಾಯನಕೆರೆಯಿಂದ ಬೆಳ್ತಂಗಡಿ ನಗರಕ್ಕೆ ಪ್ರತ್ಯೇಕ ಯುಜಿ ಕೇಬಲ್ ಅಳವಡಿಸುವಂತೆ ಮೆಸ್ಕಾಂ ಅಧ್ಯಕ್ಷರಲ್ಲಿ ಆಗ್ರಹಿಸಿದರು. ಮನವಿ ನೀಡುವ ವೇಳೆ ಅಧ್ಯಕ್ಷ ರೋನಾಲ್ಡ್ ಲೋಬೊ, ಉಪಾಧ್ಯಕ್ಷ ಶಶಿಧರ್ ಪೈ, ಜತೆ ಕಾರ್ಯದರ್ಶಿ ಯಶವಂತ್ ಪಟ್ಟರ್ಧನ್, ಸದಸ್ಯರಾದ ಜಯಾನಂದ ಗೌಡ,ವಿಲ್ಸನ್ ಗೊನ್ಸಲ್ವಿಸ್, ಚಂದ್ರಕಾಂತ್ ಕಾಮತ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here