ಸುಮಂತ್ ಹೊರಟ ನಂತರ ಬೈಕ್ ಪಾಸಾಗಿದ್ಯಂತೆ-ಅವನಿಗೇನಾದ್ರೂ ಲಿಂಕ್ ಇದ್ಯಾ ಗೊತ್ತಿಲ್ಲಒಂದು ತಿಂಗಳ ನಂತರ ಸುಮಂತ್ ತಂದೆ ಸುಬ್ರಹ್ಮಣ್ಯ ನಾಯಕ್ ಮತ್ತು ತಾಯಿ ರತ್ನಾವತಿ ಮಾತು

0

ಬೆಳ್ತಂಗಡಿ: ಗೇರುಕಟ್ಟೆ ಸಮೀಪದ ಸಂಬೋಳ್ಯದಲ್ಲಿ ಜ.೧೪ರಂದು ೯ನೇ ತರಗತಿಯ ವಿದ್ಯಾರ್ಥಿ ಸುಮಂತ್ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದು ಒಂದು ತಿಂಗಳು ಕಳೆದಿದೆ. ಸುದ್ದಿ ನ್ಯೂಸ್ ಬೆಳ್ತಂಗಡಿ ತಂಡ ಸುಮಂತ್ ಸಾವನ್ನಪ್ಪಿದಾಗ ಆ ಸ್ಥಳಕ್ಕೆ ತೆರಳಿ ಗ್ರೌಂಡ್ ರಿಪೋರ್ಟ್ ಮಾಡಿತ್ತು. ಜೊತೆಗೆ ಆರಂಭಿಕ ದಿನಗಳಲ್ಲಿ ಸುಮಂತ್ ತಂದೆ, ತಾಯಿ, ಮಾವ, ಸ್ನೇಹಿತರು, ನೆರೆಹೊರೆಯವರು ಮತ್ತು ಸಹೋದರನನ್ನು ಮಾತನಾಡಿಸಿ ವರದಿ ಮಾಡಿತ್ತು. ಒಂದು ತಿಂಗಳ ನಂತರ ಸುಮಂತ್ ತಂದೆ ಸುಬ್ರಹ್ಮಣ್ಯ ನಾಯಕ್ ಮತ್ತು ತಾಯಿ ರತ್ನಾವತಿಯವರನ್ನು ಮಾತನಾಡಿಸಲಾಯಿತು.

ಈ ವೇಳೆ ಸುಮಂತ್ ತಂದೆ ಮತ್ತು ತಾಯಿ ನಮಗೆ ಮಗನ ನೆನಪು ಕಾಡುತ್ತಾ ಇದೆ. ನನ್ನ ಮಗನ ಸಾವಿಗೆ ಕಾರಣವೇನು ಅಂತ ತಿಳಿಯಬೇಕಾಗಿದೆ. ಆತನ ಸಹೋದರನ ಮೇಲೆ ವಿನಾಕಾರಣ ಆರೋಪಗಳು ಬಂತು. ಆರೋಪ ಮಾಡಿದವರ ವಿರುದ್ಧ ಕೇಸ್ ದಾಖಲಿಸಿದ್ದೇವೆ. ಗೃಹ ಸಚಿವರನ್ನು ಭೇಟಿಯಾಗಿzವೆ. ಇದೆಲ್ಲದರ ಜೊತೆ ಮಗ ಸುಮಂತ್ ಮನೆಯಿಂದ ಹೊರಟ ವೇಳೆಯಲ್ಲೇ ಒಂದು ಬೈಕ್ ಪಾಸಾಗಿದ್ಯಂತೆ, ಕೋಟ್ ಧರಿಸಿದ ವ್ಯಕ್ತಿಯಂತೆ ಅಂತ ಸ್ಥಳೀಯರು ಹೇಳಿದ್ದಾರೆ. ಆತನಿಗೂ ಮಗನ ಸಾವಿಗೂ ಲಿಂಕ್ ಇದ್ಯಾ ಅಂತಾ ಪೊಲೀಸ್ ನವರಲ್ಲಿ ಕೇಳಿದ್ದೇವೆ. ಅವರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸುಮಂತ್ ತಂದೆ ಸುಬ್ರಹ್ಮಣ್ಯ ನಾಯಕ್ ಹಾಗೂ ತಾಯಿ ರತ್ನಾವತಿಯವರು ನೀಡಿರುವ ಸಂದರ್ಶನದ ಸಂಪೂರ್ಣ ವಿವರವನ್ನೂ ಕೆಳಗೆ ನೀಡಿದ್ದೇವೆ.

ಪ್ರಶ್ನೆ ಉಳಿದಿದೆ: ನನ್ನ ಮಗನ ಸಾವು ಯಾಕೆ ಅನ್ನುವ ಪ್ರಶ್ನೆ ಉಳಿದಿದೆ ನಾವು ಹೇಗಿzನೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಅವನ ನೆನಪಲ್ಲೇ ಇದ್ದೇವೆ. ಮರೆಯುವುದಕ್ಕೆ ಆಗುವುದಿಲ್ಲ. ಸಾವಿಗೆ ಕಾರಣ ಏನು ಅನ್ನುವುದು ಗೊತ್ತಾಗಿಲ್ಲ. ನಾವು ಮಂಗಳೂರಿನಲ್ಲಿ ಗೃಹಸಚಿವರನ್ನು ಭೇಟಿಯಾಗಿ ಬಂದಿzವೆ. ನಾವು ಎರಡು ಮಕ್ಕಳಿಗೋಷ್ಕರ ಬದುಕಿzವೆ. ತನಿಖೆ ಯಾವ ರೀತಿ ಆಗಿದೆ ಅಂತ ನಮಗೆ ಹೇಳುತ್ತಿಲ್ಲ. ಎಫ್.ಎಸ್.ಎಲ್. ರಿಪೋರ್ಟ್ ಬರಲಿಕ್ಕಿದೆ ಅಂತ ಹೇಳುತ್ತಿದ್ದಾರೆ. ಪೊಲೀಸ್ ನವರು ಮನೆಗೆ ಬರ್ತಾರೆ, ತನಿಖೆ ಕೂಡ ಮಾಡುತ್ತಿದ್ದಾರೆ. ಆರಂಭದಲ್ಲಿ ಶಾಸಕ ಪೂಂಜರವರು, ರಕ್ಷಿತ್ ಶಿವರಾಂ ಎಲ್ಲರೂ ಕೂಡ ಬಂದಿದ್ದರು. ಪೂಂಜರವರು ಅಧಿವೇಶನದಲ್ಲಿಯೂ ಮಾತನಾಡಿದ್ದಾರೆ. ಮಂಗಳೂರಿನಲ್ಲಿ ನಾವು ಗೃಹಸಚಿವರನ್ನು ಭೇಟಿಯಾಗುವಾಗ ರಕ್ಷಿತ್ ಶಿವರಾಂ ಕೂಡ ಇದ್ದರು. ಗೃಹ ಸಚಿವರು ಎಸ್.ಪಿ.ಯವರಲ್ಲಿ ವಿಚಾರಿಸಿದರು. ಎಸ್.ಪಿ. ಯವರು ಭರವಸೆ ನೀಡಿದ್ದಾರೆ. ಪೊಲೀಸ್ ನವರು ನಿರಂತರ ಪ್ರಯತ್ನದಲ್ಲಿದ್ದಾರೆ. ನನಗೆ ಯಾರ ಮೇಲೂ ಕೂಡ ದ್ವೇಷವಿಲ್ಲ. ನಮ್ಮಲ್ಲಿ ಈಗ ನನ್ನ ಮಗನ ಸಾವು ಯಾಕೆ ಅನ್ನುವ ಪ್ರಶ್ನೆ ಮಾತ್ರ ನಮ್ಮಲ್ಲಿ ಉಳಿದಿದೆ ಎಂದು ಸುಬ್ರಹ್ಮಣ್ಯ ನಾಯಕ್ ಹೇಳಿದ್ದಾರೆ.

ದೊಡ್ಡ ಮಗನ ಮೇಲೆ ಆರೋಪ ಮಾಡಿದರು: ಸುಮಂತ್ ಹೋದ ಸಮಯದಲ್ಲಿ ಬೈಕ್ ಒಂದು ಪಾಸಾಗಿದ್ಯಂತೆ, ಅದಕ್ಕೇನಾದರೂ ಲಿಂಕ್ ಇದ್ಯಾ ಗೊತ್ತಿಲ್ಲ. ಅವನ ನೆನಪೇ ಪದೆ ಪದೇ ಬರುತ್ತಿದೆ. ಅವನ ಮುಖವೇ ಕಣ್ಣೇದುರಿಗೆ ಬರ್ತಾ ಇದೆ. ನಿದ್ದೆಯೂ ಕೂಡ ಬರುತ್ತಿಲ್ಲ. ಏನಾಯ್ತು ಅನ್ನುವುದು ಪ್ರಶ್ನೆಯೇ ಹೊರತು ಉತ್ತರ ಸಿಕ್ಕಿಲ್ಲ. ನೂರು ಪ್ರಶ್ನೆ ತಲೆಯಲ್ಲಿ ಓಡುತ್ತಾ ಇದೆ. ಅದರೆಡೆಯಲ್ಲಿ ನನ್ನ ದೊಡ್ಡ ಮಗನ ಮೇಲೆ ತುಂಬಾ ದೊಡ್ಡ ಆರೋಪ ಕೇಳಿಬಂತು. ಬೋಳಂಗಡಿಯವರು ಇಲ್ಲಿಗೆ ಬರಲೇ ಇಲ್ಲ. ಅವರ ಇಚ್ಛೆಯ ಪ್ರಕಾರ ದೊಡ್ಡ ಮಗನ ಮೇಲೆ ಆರೋಪ ಮಾಡಿದರು. ಇದರಿಂದ ಅವನು ಎರಡು ದಿನ ಮಾತಾಡುತ್ತಾ ಇರಲಿಲ್ಲ. ತಿಂಡಿ ತಿನ್ನುತ್ತಾ ಇರಲಿಲ್ಲ, ಏನಾಯ್ತು ಅಂತ ಕೇಳಿದಾಗ ಮೊಬೈಲ್ ನಲ್ಲಿ ಹೀಗೆ ಹೀಗೆ ಬಂದಿದೆ ಅಂತ ಹೇಳಿದರು. ನನಗೆ ತುಂಬಾನೇ ಬೇಸರವಾಯಿತು. ಒಬ್ಬ ಮಗನನ್ನು ಕಳೆದುಕೊಂಡು ನೋವಲ್ಲಿ ಇರುವಾಗ, ಇರುವ ಮಗನನ್ನೂ ಕಳೆದುಕೊಳ್ಳುತ್ತೇನೋ ಅನ್ನುವ ಭಾವನೆ ಮನಸ್ಸಲ್ಲಿ ಬಂದಿದೆ. ಇಲ್ಲಿ ಬಂದು ನಮ್ಮಲ್ಲಿ ಏನಾದ್ರೂ ಕೇಳಿ ಬರೆಯುತ್ತಿದ್ದರೆ ಆಗುತ್ತಿತ್ತು. ಆದರೆ ಅವರು ಏನೂ ಕೇಳದೇ ಬರೆದಿದ್ದಾರೆ. ಅವರ ಮೇಲೆ ಬೆಳ್ತಂಗಡಿಯಲ್ಲಿ ದೂರು ನೀಡಿದ್ದೇವೆ. ಎಸ್ ಪಿಯವರಿಗೂ ಕ್ರಮಕ್ಕೆ ಆಗ್ರಹಿಸಿ ಕೂಡ ಮನವಿ ಮಾಡಿzವೆ. ಇಬ್ಬರು ಮಕ್ಕಳಿಗಾಗಿ ಬದುಕಿದ್ದೇವೆ. ಸಣ್ಣ ಮಗಳು ಒಂದು ಅಕ್ಷರದಲ್ಲೂ ಅಣ್ಣನನ್ನು ಕೇಳುವುದಿಲ್ಲ. ನಮಗಿಂತ ಗಟ್ಟಿಯಾಗಿದ್ದಾಳೆ. ನಾವು ಕಣ್ಣೀರು ಹಾಕುವಾಗ ಏನಾದ್ರೂ ಹೇಳಿ ನಮ್ಮನ್ನು ಸಮಾಧಾನ ಮಾಡುತ್ತಾಳೆ. ಸುಮಂತ್ ಇರುವಾಗ ರಬ್ಬರ್ ತೆಗೆದ್ರು, ಪೆನ್ಸಿಲ್ ತೆಗೆದ ಅಂತ ಗಲಾಟೆ ಮಾಡುತ್ತಿದ್ದರು. ಆದರೆ ಈಗ ಅವನ ಹೆಸರೂ ಕೂಡ ತೆಗೆಯದೇ ಗಟ್ಟಿಯಾಗಿದ್ದಾಳೆ. ಮೊನ್ನೆ ಒಂದು ಅವನ ಆಟದ ಸಾಮಾನು ತೆಗೆದು ಹಾಕಿದಳು. ಆವಾಗ ಅದು ಯಾರದ್ದು ಅಂತ ಕೇಳಿದಾಗಲೂ ಅವಳು ಗೊತ್ತಿಲ್ಲ ಅಂತಲೇ ಹೇಳಿದಳು. ನಮ್ಮ ಜಾತಿಯ ಸಂಘದವರು ಬಂದು, ಧೈರ್ಯ ತುಂಬಿದ್ದಾರೆ.

ನಮಗೆ ಅನುಮಾನ ಇಲ್ಲ. ಆದರೆ ಅದೇ ದಿವಸ ಬೆಳಗ್ಗೆ ನನ್ನ ಮಗ ಹೋದ ಸಮಯದಲ್ಲಿ ಒಂದು ಅಪರಿಚಿತ ಬೈಕ್ ಪಾಸಾಗಿರುವ ಬಗ್ಗೆ ಗೊತ್ತಾಗಿದೆ. ಮೇಲಿನಿಂದ ಕೆಳಗಿನವರೆಗೆ ಕೋಟ್ ಹಾಕಿಕೊಂಡು ಇದ್ದನಂತೆ. ಬೈಕ್ ಪಾಸಾಗಿದೆ ಅಂತ ಹತ್ತಿರದ ಮನೆಯವರು ಹೇಳಿದರು. ಹತ್ತಿರದ ಮನೆಯವರು ಧನುಪೂಜೆಗೆ ಹೊರಡುವಾಗ ನೋಡಿದ್ದಾರೆ ಅಂತ ಹೇಳಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಲೈಟ್ ಪಾಸಾಗಿರುವುದು ಮಾತ್ರ ಗೊತ್ತಾಗಿದೆಯಂತೆ. ರಬ್ಬರ್ ಟ್ಯಾಪಿಂಗ್ ಗೆ ಬರುವ ರಿಕ್ಷಾದವರ ರಿಕ್ಷಾಕ್ಕೆ ಬೈಕ್ ನವರು ತಾಗಿಸಿಕೊಂಡು ಹೋಗಿದ್ದಾನಂತೆ. ಇದನ್ನು ಪೊಲೀಸ್ ನವರಿಗೆ ತಿಳಿಸಲಾಗಿದೆ. ಅದರ ಬಗ್ಗೆ ತನಿಖೆ ಮಾಡುತ್ತಿzವೆಂದು ತಿಳಿಸಿದ್ದಾರೆ. ನೂರಕ್ಕೆ ನೂರು ಹುಡುಕಿಕೊಡುತ್ತೇವೆ ಅಂತ ಪೊಲೀಸ್ ನವರು ಭರವಸೆ ನೀಡಿದ್ದಾರೆ. ಆ ಬೈಕ್ ಮತ್ತು ಇವನು ಹೋದ ಸಮಯ ಒಂದೇ ಹೊತ್ತು.ಆದ್ದರಿಂದ ಏನಾದರೂ ಲಿಂಕ್ ಇರಬಹುದಾ ಅನ್ನುವುದು ನಮಗೂ ಡೌಟ್ ಆಗಿದೆ. ಅವನನ್ನು ಹುಡುಕಿ ಅಂತ ಪೊಲೀಸ್ ನವರಿಗೆ ಹೇಳಿದ್ದೇವೆ. ಪೊಲೀಸ್ ನವರು ಹುಡುಕಿ ಕೊಡುತ್ತೇವೆ ಅಂತ ತಿಳಿಸಿದ್ದಾರೆ ಎಂದು ತಾಯಿ
ರತ್ನಾವತಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here