







ಗುರುವಾಯನಕೆರೆ: ಕಳೆದ ಎರಡು ದಿನಗಳಿಂದ ಚಿರತೆ ಕಂಡು ಬಂದಿರುವ ಬಗ್ಗೆ ಸುದ್ದಿಯಾಗುತ್ತಿದ್ದು, ಫೆ.6ರಂದು ಮಧ್ಯ ರಾತ್ರಿ ಗುರುವಾಯನಕೆರೆಯ ಬಸ್ ನಿಲ್ದಾಣ ಹತ್ತಿರ ಇರುವ ಮದಿರ ಬಾರ್ ಆಂಡ್ ರೆಸ್ಟೋರೆಂಟ್ ಪಕ್ಕ ಚಿರತೆ ಕಂಡು ಬಂದಿರುವುದು ತಿಳಿದು ಬಂದಿದೆ.


ಮದಿರ ಬಾರ್ ಆಂಡ್ ರೆಸ್ಟೋರೆಂಟ್ ಮೇಲೆ ಮಹಡಿಯಲ್ಲಿ ಇದ್ದ ಸ್ಥಳೀಯರೊಬ್ಬರು ಚಿರತೆಯು ಬೀದಿ ನಾಯಿಯನ್ನು ಅಟ್ಟಾಡಿಸಿಕೊಂಡು ಹೋಗುವುದನ್ನು ನೋಡಿ ತಕ್ಷಣ ಅರಣ್ಯ ಇಲಾಖೆಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ರಾತ್ರಿ ಕರೆ ಸ್ವೀಕರಿಸದ ಹಿನ್ನೆಲೆ ಬೆಳಗ್ಗೆ ಮತ್ತೆ ಮಾಹಿತಿ ತಿಳಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ಚಿರತೆ ಅರೆ ಬರೆ ತಿಂದು ಬಿಟ್ಟುರುವ ಬೀದಿ ನಾಯಿ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಗುರುವಾಯನಕೆರೆ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಸ್ಥಳೀಯರು ನೋಡಿ ಸುದ್ದಿ ಬಿಡುಗಡೆಗೆ ತಿಳಿಸಿದ್ದಾರೆ. ಗುರುವಾಯನಕೆರೆ ಆಸುಪಾಸಿನಲ್ಲಿ ಚಿರತೆ ಇರುವ ಮಾಹಿತಿ ತಿಳಿದ ನಂತರದಿಂದ ಊರ ಮಂದಿ ಭಯಭೀತರಾಗಿದ್ದು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ.









