ಉರುವಾಲು:ತಾಲೂಕು ಮಟ್ಟದಲ್ಲೂ ಜಿಲ್ಲಾ ಮಟ್ಟದಲ್ಲೂ ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸಾಧನೆ

0

ಅಕ್ಟೋಬರ್ 23 ಮತ್ತು 24 ರಂದು ಸೇಕ್ರೆಡ್ ಹಾರ್ಟ್ ಶಾಲೆ ಮಡಂತ್ಯಾರು ಇಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡೆಯಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಥಾನಗಳಲ್ಲಿ ವಿಜೇತರಾಗಿರುತ್ತಾರೆ.

ಮುಹಮ್ಮದ್ ಶಮ್ಮಾಸ್ 8ನೇ ತರಗತಿ80 mtr ಹರ್ಡಲ್ಸ್ ಹಾಗೂ ಪವೀಕ್ಷ ರೈ 10 ನೇ ತರಗತಿ ಗುಂಡೆಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು, ಅಕ್ಟೋಬರ್ 27 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಧೆಯಲ್ಲಿ ಭಾಗವಹಿಸಿ 4 ನೇ ಸ್ಥಾನ ಪಡೆದು ಶಾಲೆಗೂ ಹೆತ್ತವರಿಗೂ ಹೆಮ್ಮೆ ತಂದಿರುತ್ತಾರೆ.

ಭಾಗವಹಿಸಿದ ವಿದ್ಯಾರ್ಥಿಗಳಿಗೂ , ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೂ ಶಾಲಾ ಸೇವಾ ಸಮಿತಿ ಹಾಗೂ ಶಿಕ್ಷಕ- ಪೋಷಕ ವೃಂದ ಶುಭಾಶಯ ಕೋರಿದ್ದಾರೆ

LEAVE A REPLY

Please enter your comment!
Please enter your name here