ಉಜಿರೆಯ ಮುಹಮ್ಮದ್ ನಿಶ್ವಾನ್ ಗೆ ಎನ್ ಎಸ್ ಎಸ್ ರಾಜ್ಯ ಪ್ರಶಸ್ತಿ

0

ಉಜಿರೆ; ಅನೇಕ ಸಾಧನೆಗಳೊಂದಿಗೆ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿ ಕೊಂಡ ಅದ್ಭುತ ಪ್ರತಿಭೆ ನಮ್ಮ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಗಾಂಧಿನಗರ ನಿವಾಸಿ ನಫೀಸಾ ಶೀಬಾ, ಉಸ್ಮಾನ್ ದಂಪತಿಯ ಪುತ್ರ ಮಂಗಳೂರಿನ ಯೆನೆಪೋಯ ಯುನಿವರ್ಸಿಟಿಯ ಅಂತಿಮ ವರ್ಷದ MBA ಹಾಗೂ CMA ವಿದ್ಯಾರ್ಥಿ ನಮ್ಮೂರಿನ ಪ್ರತಿಭೆ ಮುಹಮ್ಮದ್ ನಿಶ್ವಾನ್ ಕರ್ನಾಟಕ ಸರ್ಕಾರದ NSS ಅತ್ಯುತ್ತಮ ರಾಜ್ಯ ಪ್ರಶಸ್ತಿಯು ಕರ್ನಾಟಕ ರಾಜಭವನದಲ್ಲಿ ರಾಜ್ಯಪಾಲರದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಅವರು ಬಹುಮುಖ ಪ್ರತಿಭೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ನಡೆದ ಯುವ ಸಂಸತ್ತಿನಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಕಾಲೇಜಿನ ಕಲಿಕೆಯಲ್ಲಿ Topper ಆಗಿದ್ದು ಸಾಂಸ್ಕೃತಿಕ ಸೇವಾ ರಂಗದ ಉತ್ತಮ ಸಾಧನೆಗಾಗಿ “Best out going student”ಆಗಿ ಆಯ್ಕೆಯಾಗಿದ್ದು.ಪ್ರಸ್ತುತ ಇವರ ವಿದ್ಯಾಭ್ಯಾಸದ ಸಲುವಾಗಿ ಪೋಷಕರೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.

ವರದಿ: ಅಮ್ಮಿ ಬೆಳ್ತಂಗಡಿ✍️

LEAVE A REPLY

Please enter your comment!
Please enter your name here