






ದಿಡುಪೆ: ಮನೆಯೊಂದರ ಅಂಗಳದಲ್ಲಿ ಚಿರತೆಯೊಂದು ಕಾಣಿಸಿಕೊಂಡ ಘಟನೆ ಮಲವಂತಿಗೆ ಗ್ರಾಮದ ಕೊಂಡಾಲು ಮನೆಯಲ್ಲಿ ಫೆ.5 ರಂದು ತಡರಾತ್ರಿ ನಡೆದಿದೆ. ಚಿರತೆ ಓಡಾಟದ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯಂಗಳದಲ್ಲಿ ಮಲಗಿದ್ದ ನಾಯಿಯ ಬೇಟೆಗಾಗಿ ಚಿರತೆ ಬಂದಿದ್ದು, ನಾಯಿಯನ್ನು ಅಟ್ಟಿಸಿಕೊಂಡು ಹೋಗುವ ಮತ್ತು ತೆಗೆದುಕೊಂಡು ಹೋಗುವ ದೃಶ್ಯ ಜಯಂತ್ ಅವರ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.10:30 ರಾತ್ರಿ ನಾಯಿ ಬೊಗಳಿ ತಕ್ಷಣ ಸಿ ಸಿ ಕ್ಯಾಮೆರಾ ಶಬ್ದ ಆಗಿದೆ ಮನೆಯವರು ಹೊರಬಂದಿದ್ದು.



ಚಿರತೆ ತಕ್ಷಣ ತೆರಳಿದೆ ಕೆಲವು ದಿನಗಳಿಂದ ಆಸುಪಾಸಿನಲ್ಲಿ ಚಿರತೆ ಓಡಾಟದ ಮಾಹಿತಿ ಇತ್ತು ಎನ್ನಲಾಗಿದೆ. ಸ್ವಲ್ಪ ಹೊತ್ತಿನಲ್ಲಿ ನಾಯಿಯ ಶಬ್ದ ಕೂಡ ಕೇಳಿರಲಿಲ್ಲ. ಮನೆಯ ಸಿಸಿಟಿವಿ ದ್ರಶ್ಯಾವಳಿ ಗಮನಿಸಿದಾಗ ಚಿರತೆ ನಾಯಿಯನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಭಯಭೀತರಾಗಿದ್ದಾರೆ. ಈ ಭಾಗದಲ್ಲಿ ಆತಂಕ ಸೃಷ್ಟಿಸಿದೆ. ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು, ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.









