ಫೆ.7: ನಾರ್ಯ ನೃತ್ಯ ಭಜನಾ ಕಮ್ಮಟೋತ್ಸವ-ಸಾಧಕರಿಗೆ ಸನ್ಮಾನ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಾರ್ಯ ಸುಜ್ಞಾನ ಭವನ ವಠಾರದಲ್ಲಿ ಫೆ.7ರಂದು ನೃತ್ಯ ಭಜನಾ ಕಮ್ಮಟೋತ್ಸವ, ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ ಡಿ. ಹಷೇರ್ಂದ್ರ ಕುಮಾರ್‌ರವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಶ್ರೀ ಷಣ್ಮುಖ ಭಜನಾ ಮಂಡಳಿ ನಾರ್ಯ ಧರ್ಮಸ್ಥಳ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಹಾಗೂ ಊರವರ ಸಾಕಾರದಿಂದ ಭಜನಾ ಗುರು ನಾಗೇಶ್ ಬಿ. ನೆರಿಯ ಅವರ ಸಾರಥ್ಯದಲ್ಲಿ ತಾಲೂಕಿನ ಆಯ್ದ ವಿವಿಧ ಭಜನಾ ಮಂಡಳಿಗಳ ಭಜಕರಿಂದ ಏಕಕಾಲದಲ್ಲಿ ನೃತ್ಯ ಭಜನಾ ಕಮ್ಮಟೋತ್ಸವ ನಡೆಯಲಿದೆ. ಸಂಜೆ 4ಕ್ಕೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, 6:30ಕ್ಕೆ ಭಜನಾ ಕಮ್ಮಟ ನಡೆಯಲಿದೆ.

41 ತಂಡಗಳು ಭಾಗಿಯಾಗಿ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಜಕರು ಏಕ ಕಾಲದಲ್ಲಿ ನೃತ್ಯ ಭಜನೆಮಾಡಲಿದ್ದಾರೆ. 250 ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇದೇ ವೇಳೆ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಸಂಸದ ಬ್ರಿಜೇಶ್ ಚೌಟ, ಡಿ. ಹರ್ಷೇಂದ್ರ ಕುಮಾ‌ರ್, ಧರ್ಮದರ್ಶಿ ಹರೀಶ್ ಆರಿಕೋಡಿ, ಉಜಿರೆಯ ಶರತ್ ಕೃಷ್ಣ ಪಡುವೆಟ್ನಾಯ, ಧಾರ್ಮಿಕ ಮುಖಂಡ ಕಿರಣ್‌ ಚಂದ್ರ ಪುಷ್ಪಗಿರಿ, ಶಾಸಕ ಹರೀಶ್ ಪೂಂಜ, ಉದ್ಯಮಿ ಮೋಹನ್ ಕುಮಾ‌ರ್, ಪಿಲಿಗೂಡು ಪದ್ಮನಾಭ ಶಿಲ್ಪಿ ಮತ್ತಿತರರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here