ಫೆ.8 ಮಾಲಾಡಿ ಗ್ರಾಮ ಪಂಚಾಯತ್ ವಠಾರದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ

0

ಮಾಲಾಡಿ : ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನಿತ್ ಕುಮಾರ್ ಮಡಂತ್ಯಾರು ನೇತೃತ್ವದಲ್ಲಿ ಹಾಗೂ ಗ್ರಾಮಪಂಚಾಯತ್ ಮಾಲಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಪಡಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಆರ್) ಟ್ರಸ್ಟ್ ಮಡಂತ್ಯಾರು ವಲಯ, ಯುನೈಟೆಡ್ ಮಾಲಾಡಿ , ಶ್ರೀ ಶನೈಶ್ಚರ ಪೂಜಾ ಸಮಿತಿ ಮಾಲಾಡಿ,ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ಪಣಕಜೆ, ಸೋಣಂದೂರು ಸ್ಪಂದನ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ (ರಿ.) | B.M ಆಪೆ ರಿಕ್ಷಾ ಚಾಲಕ-ಮಾಲಕರ ಸಂಘ, ಮಂಡಂತ್ಯಾರು, ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ (ರಿ.) ಮಡವು | ಸೌಹಾರ್ಧ ಫ್ರೆಂಡ್ಸ್ ಮಡಂತ್ಯಾರು,ಇವರ ಸಹಕಾರದೊಂದಿಗೆ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ|ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ,ಎ.ಜೆ. ದಂತ ವಿಜ್ಞಾನ ಸಂಸ್ಥೆ,ಇಂಡಿಯನ್ ಕ್ಯಾನ್ಸ‌ರ್ ಸೊಸೈಟಿ ಇಲ್ಲಿನ ತಜ್ಞ ವೈದ್ಯರ ತಂಡದಿಂದ ಬೃಹತ್ಆರೋಗ್ಯ ತಪಾಸಣಾ ಶಿಬಿರ ಫೆ.08ರಂದು ಆದಿತ್ಯವಾರ ಬೆಳಿಗ್ಗೆ 9.00 ರಿಂದ 2.00 ತನಕ ಮಾಲಾಡಿ ಗ್ರಾಮ ಪಂಚಾಯತ್ ವಠಾರದಲ್ಲಿ ನೇತ್ರಶಾಸ್ತ್ರಜ್ಞರು, ದಂತ ವೈದ್ಯರು, ಮೂತ್ರಶಾಸ್ತ್ರಜ್ಞರು, ಹೃದ್ರೋಗ ತಜ್ಞರು, ಸ್ತ್ರೀರೋಗ ತಜ್ಞರು,ಮೆಡಿಸಿನ್ ಜನರಲ್,ಮೂಳೆ ತಜ್ಞರು,ಕಿವಿ, ಮೂಗು ಮತ್ತು ಗಂಟಲು ತಜ್ಞರು, ಈ ವಿಭಾಗದ ವೈದ್ಯರು ಉಪಸ್ಥಿತರಿರುವರು.

20%ಹೊರ ರೋಗಿ ರಿಯಾಯಿತಿಗಳು, ರೇಡಿಯಾಲಜಿ ಪ್ರಯೋಗಾಲಯ ಮತ್ತು ಆರೋಗ್ಯ ಪ್ಯಾಕೇಜುಗಳು10%ಒಳರೋಗಿಗಳ ಪ್ರಯೋಜನಗಳು ಪಡೆಯಬಹುದು. ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣೆ ಮಾಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯ ಮಾಲಾಡಿ ಉಮೇಶ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು. 944933413499019 85022

LEAVE A REPLY

Please enter your comment!
Please enter your name here