






ಬೆಳ್ತಂಗಡಿ: ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ -ಕಲ್ಲೇರಿ ಶಾಖೆಯ ವಿವಿಧ ಸ್ವ ಸಹಾಯ ಸಂಘಗಳ ಉದ್ಘಾಟನೆಯನ್ನು ಜ. 14ರಂದು ಮದ್ಯಾಹ್ನ ಉರುವಾಲು ಗ್ರಾಮದ ಹರೀಶ್ ಗೌಡ ಅವರ ಮನೆಯಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಉದ್ಘಾಟಿಸಿದರು.


ಬಳಿಕ ಬಂದಾರು ಗ್ರಾಮದ ಅತ್ತಾವು ವಾಸಪ್ಪ ಗೌಡರ ಮನೆಯಲ್ಲಿ ಇನ್ನೊಂದು ಸ್ವಸಹಾಯ ಸಂಘದ ಉದ್ಘಾಟನೆಯನ್ನು ನೆರವೇರಿಸಿದರು. ಸೊಸೈಟಿಯ ನಿರ್ದೇಶಕರಾದ ಮಾಧವ ಗೌಡ, ಶ್ರೀನಾಥ್ ಕೆ. ಎಂ., ಸುನಿಲ್ ಅನಾವು, ಪುರಂದರ ನೈಮಾರು, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಧನಂಜಯ ಕುಮಾರ್, ಕಲ್ಲೇರಿ ಶಾಖೆಯ ವ್ಯವಸ್ಥಾಪಕ ನಿತೇಶ್ ಉಪಸ್ಥಿತರಿದ್ದರು.









