






ಉಜಿರೆ: ಉಜಿರೆಯ ಕಾಶಿಬೆಟ್ಟುವಿನ ಅಭ್ಯಾಸ್ ಪದವಿ ಪೂರ್ವ ಕಾಲೇಜ್ ಪ್ರಾಯೋಜಕತ್ವದಲ್ಲಿ ಜ.18ರಂದು ಬೆಳಗ್ಗೆ 9.30ರಿಂದ ಸಂಜೆ 4.30ರ ತನಕ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ವಿಷಯ ಪರಿಣತರಿಂದ ಪರೀಕ್ಷೆ ಪೂರ್ವಸಿದ್ಧತಾ ಕಾರ್ಯಕ್ರಮ “ಅಭ್ಯಾಸ್ ಸ್ಪಾರ್ಕ್-2026″ನ್ನು ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.


10ನೇ ತರಗತಿ ವಿದ್ಯಾರ್ಥಿಗಳು ಅಭ್ಯಾಸ್ ಕಾಲೇಜಿನ ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅಭ್ಯಾಸ್ ಕಾಲೇಜಿನ ಅಧ್ಯಕ್ಷ ಕಾರ್ತಿಕೇಯ ಎಂ.ಎಸ್. ತಿಳಿಸಿದ್ದಾರೆ.









