ವಾತ್ಸಲ್ಯ ವಿದ್ಯಾ ನಿಧಿ ಹಸ್ತಾಂತರ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಗುರುವಾಯನಕೆರೆ ಯೋಜನಾ ಕಚೇರಿಯ ವೇಣೂರು ವಲಯದ ಮಾಸಾಶನ ನೀಡುತ್ತಿರುವ ಗಣೇಶ್ ಇವರ ಕುಟುಂಬವು ಆರ್ಥಿಕವಾಗಿ ಕಷ್ಟದಲ್ಲಿರುವ ಕಾರಣ ಮಕ್ಕಳಿಗೆ ವಾತ್ಸಲ್ಯ ವಿದ್ಯಾ ನಿಧಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವೇಣೂರು ವಲಯದ ಒಕ್ಕೂಟದ ವಲಯ ಅಧ್ಯಕ್ಷರು ಗಿರೀಶ್ ಕುಲಾಲ್, ಜ್ಞಾನ ವಿಕಾಸ ತಾಲೂಕ್ ಸಮನ್ವಯ ಅಧಿಕಾರಿ ಸುಗುಣ ಶೆಟ್ಟಿ, ಸಮನ್ವಯ ಅಧಿಕಾರಿ ಮಧುರ ಹಾಗೂ ಸೇವಾ ಪ್ರತಿನಿಧಿ ಜಯಂತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here