






ಅಳದಂಗಡಿ: ನ.26ರಂದು ‘ನಮ್ಮ ಮಾತೆರ್ಲ ಒಂಜೆ ಕಲಾತಂಡ ಅರುವ’ದ ವಾರ್ಷಿಕೋತ್ಸವ ಕಾರ್ಯಕ್ರಮ ಅಳದಂಗಡಿ ಪೇಟೆಯಲ್ಲಿ ಸಂಭ್ರಮದಿಂದ ನಡೆಯಿತು. ಈ ಸಂದರ್ಭದಲ್ಲಿ ಕಲಾ ತಂಡದ ಸ್ಥಾಪಕ, ನಿರ್ದೇಶಕ ರಮೇಶ್ ಸುವರ್ಣ ಅರುವ ಇವರು ರಚಿಸಿದ ಗಗ್ಗರ ಎಂಬ ತುಳು ಸಾಮಾಜಿಕ ಹಾಸ್ಯ ಪ್ರಧಾನ ಯಕ್ಷಗಾನ ಬಯಲಾಟ ಶ್ರೀ ಆದಿ ಧೂಮಾವತಿ ಶ್ರೀ ದೇವಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಅವರಿಂದ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ವಿಜೃಂಭಣೆಯಿಂದ ನಡೆಯಿತು.



ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅಳದಂಗಡಿ ಶ್ರೀ ಕ್ಲಿನಿಕ್‌ನ ಡಾ. ಎನ್.ಎಂ. ತುಳುಪುಳೆ ವಹಿಸಿದ್ದರು. ಗಣೇಶ್ ನಾರಾಯಣ ಪಂಡಿತ್ ಮೂಡ್ಕೋಡಿ ಅವರು ಕಾರ್ಯಕ್ರಮದ ಉದ್ಘಾಟಿಸಿದರು. ಮರೋಡಿಯ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ಮತ್ತು ಉದ್ಯಮಿ ದೇವೇಂದ್ರ ಹೆಗ್ಡೆ ಪ್ರಸಂಗ ಬಿಡುಗಡೆ ಮಾಡಿದರು. ಬೆಳ್ತಂಗಡಿ ಪಿಎಲ್‌ಡಿ ಬ್ಯಾಂಕಿನ ಮಾಜಿ ನಿರ್ದೇಶಕ ಶುಭಕರ ಪೂಜಾರಿ ಸಾವ್ಯ, ಯುವವಾಹಿನಿ ವೇಣೂರಿನ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ ಡೊನ್ಕೊಟ್ಟು, ಪ್ರಶಾಂತ್ ಶೆಟ್ಟಿ, ನವೀನ್ ಕುಮಾರ್ ಶೆಟ್ಟಿ ಸಾವ್ಯ ನ್ಯಾಯವಾದಿ ಮಂಗಳೂರು, ಸಂಜೀವ ಪೂಜಾರಿ ಕೊಡಂಗೆ ಕೃಷಿಕರು ಅಳದಂಗಡಿ, ಪಿ.ಎಚ್. ಪ್ರಕಾಶ್ ಶೆಟ್ಟಿ ನೊಚ್ಚ, ರಮಾನಂದ ಗುಡ್ಡಾಜೆ ಶಿರ್ಲಾಲು, ಪ್ರಸನ್ನ ಹೆಗ್ಡೆ ಕರಂಬಾರುಗುತ್ತು ಕರಂಬಾರು, ರವೀಶ್ ಶ್ರೀಲಕ್ಷ್ಮಿ ಕೊಕ್ಕಡ, ರಾಜವರ್ಮ ಜೈನ್ ’ನಮನ’ ಅಳದಂಗಡಿ, ಮೊಬ್ಬಿಯಾಸ್ ರೋಯಲ್, ಅಧ್ಯಕ್ಷರು ಜುಮ್ಮಾ ಮಸೀದಿ ಅಳದಂಗಡಿ, ಶ್ರೀಮತಿ ರತ್ನ ಪಾಡಿಪಿಲ್ಯ ಕಾಂಪ್ಲೆಕ್ಸ್ ಪಿಲ್ಯ, ಪೂರ್ಣಿಮ ಜೆ. ಅಳದಂಗಡಿ ಪಿಡಿಒ, ಮೀರಾ ಎನ್. ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವ್ಯ.ಸೇ.ಸ.ಸಂಘ ಅಳದಂಗಡಿ, ಜ್ಯೋತಿ ಸುರೇಶ್ ಮೊಂತೆರೊ ಅಳದಂಗಡಿ, ವಸಂತಿ ಸಿ ಪೂಜಾರಿ ಕುದ್ಯಾಡಿ, ಕಾಂಗ್ರೆಸ್ ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶಾರದ ‘ಶ್ರೀದೇವಿ ನಿಲಯ’ ಅಳದಂಗಡಿ,
ಮೊದಲದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರ ದಲ್ಲಿ ಸಾಧನೆ ಗೈದ ಸಾಧಕರನ್ನು ಗೌರವಿಸಲಾಯಿತು. ಅಜಿತ್ ಕುಮಾರ್ ಜೈನ್ ಕೊಕ್ರಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.









