






ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಆರೋಪಿಯಾಗಿ ರುವ ಮಂಡ್ಯ ಮೂಲದ ಚಿನ್ನಯ್ಯ ಸಿ.ಎನ್. ತನಗೆ ಹಾಗೂ ತನ್ನ ಪತ್ನಿಗೆ ಜೀವ ಬೆದರಿಕೆ ಇರುವುದಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ತನಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಾರಂಭದಲ್ಲಿ ಚಿನ್ನಯ್ಯನ ಜತೆಗಿದ್ದು ಪ್ರಸ್ತುತ ಬುರುಡೆ ಪ್ರಕರಣದ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂಬ ಆರೋಪ ಎದುರಿ ಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ, ಜಯಂತ್ ಟಿ. ಹಾಗೂ ಸಮೀರ್ ಎಂ.ಡಿ. ವಿರುದ್ಧ ಡಿ. ೧೮ರಂದು ಚಿನ್ನಯ್ಯ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ಅರ್ಜಿ ಸಲ್ಲಿ ಸಿದ್ದು ಅವರ ಮನವಿ ಸ್ವೀಕರಿಸಿರುವ ಪೊಲೀಸರು ದೂರು ಅರ್ಜಿಯನ್ನು ದಾಖಲಿ ಸಿಕೊಂಡಿದ್ದಾರೆ. ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯದಿಂದ ನ.೨೪ರಂದು ಜಾಮೀನು ಮಂಜೂರಾಗಿ ಬಿಡುಗಡೆಗೆ ಸಂಬಂಧಿಸಿ ೧೨ ಷರತ್ತುಗಳನ್ನು ವಿಧಿಸಿದ ಸಂದರ್ಭದಲ್ಲಿ ಚಿನ್ನಯ್ಯನ ಪತ್ನಿ ಮಲ್ಲಿಕಾ ಅವರು ಷರತ್ತುಗಳಿಂದ ವಿನಾಯಿತಿ ನೀಡು ವಂತೆ ತಮ್ಮ ಪರ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆ ಸಂದರ್ಭದಲ್ಲಿಯೂ ಬಿಡುಗಡೆಯ ಬಳಿಕ ಜೀವ ಬೆದರಿಕೆ ಇರುವುದರಿಂದ ರಕ್ಷಣೆ ನೀಡಲು ಪೊಲೀಸರಿಗೆ ಸೂಚಿಸುವಂತೆ ನ್ಯಾಯಾಲಯದಲ್ಲಿ ವಿನಂತಿಸಿದ್ದರು. ಚಿನ್ನಯ್ಯ ಬಿಡುಗಡೆಗೊಂಡ ಬಳಿಕ ಮಂಡ್ಯದಲ್ಲಿ ವಾಸಿಸಲು ನಿರ್ಧರಿಸಿರು ವುದರಿಂದ ರಕ್ಷಣೆಗಾಗಿ ಅಲ್ಲಿನ ಪೊಲೀಸ ರಿಗೂ ಸೂಚಿಸುವಂತೆ ತಿಳಿಸಿದ್ದರು. ಇದೀಗ ಜೀವ ಬೆದರಿಕೆಯ ಕುರಿತು ಐವರ ಹೆಸರು ದಾಖಲಿಸಿ ಪೊಲೀಸ್ ರಕ್ಷಣೆಯನ್ನು ಕೋರಿದ್ದು ಪೊಲೀಸ್ ಇಲಾಖೆ ಅವರ ಅರ್ಜಿಗೆ ಸಂಬಂಧಿಸಿ ಯಾವಕ್ರಮಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ತನಿಖೆ ನಡೆಸಲು ಮುಖ್ಯಮಂತ್ರಿಗೆ ಜಯಂತ್ ಟಿ. ಪತ್ರ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟಿದ್ದೇನೆ ಎಂದು ಹೇಳಿಕೆ ನೀಡಿರುವ ಬುರುಡೆ ಪ್ರಕರಣದ ಅರೋಪಿ ಚಿನ್ನಯ್ಯ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಮನವಿ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ತನಿಖೆ ನಡೆಸುವಂತೆ ಜಯಂತ್ ಟಿ. ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ, ವಿಠಲ ಗೌಡ ಮತ್ತು ಸಮೀರ್ ಎಂ.ಡಿ. ವಿರುದ್ಧ ಚಿನ್ನಯ್ಯ ನೀಡಿರುವ ನೀಡಿದ ದೂರಿನ ಬಗ್ಗೆ ತನಿಖೆ ನಡೆಸಬೇಕು. ಇದರ ಜೊತೆಗೆ ಈ ದೂರು ನೀಡಲು ಒತ್ತಡ ಹಾಕಿ ಪಿತೂರಿ ನಡೆಸಿರುವ ಕುರಿತು ತನಿಖೆ ತನಿಖೆ ನಡೆಸಬೇಕು ಮತ್ತು ಚಿನ್ನಯ್ಯನಿಗೆ ಸೂಕ್ತ ಪೊಲೀಸ್ ಬಂದೋಬಸ್ತು ಒದಗಿಸಿ ರಕ್ಷಣೆ ನೀಡಬೇಕು ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಜಯಂತ್ ಟಿ. ಒತ್ತಾಯಿ ಸಿದ್ದಾರೆ.
ಪತ್ರದ ಸಾರಾಂಶ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಅರ್ ೩೯/೨೦೨೫ರ ಪ್ರಕರಣದ ದೂರುದಾರ/ಅರೋಪಿಯಾಗಿರುವ ಚಿನ್ನಯ್ಯ ಬೆಳ್ತಂಗಡಿ ಪೊಲೀಸ್ ಠಾಣೆ ಯಲ್ಲಿ ಜೀವ ರಕ್ಷಣೆ ಕೋರಿ ಸೌಜನ್ಯ ಹೋರಾಟಗಾರರ ವಿರುದ್ಧ ನೀಡಿದ ದೂರಿನ ಬಗ್ಗೆ ತನಿಖೆ ನಡೆಸಿ ಹೋರಾಟಗಾರರ ವಿರುದ್ಧ ದೂರು ನೀಡಲು ಒತ್ತಡ ಹಾಕಿ ನಡೆಸಿರುವ ಅಪರಾಧಿಕ ಪಿತೂರಿ ಕುರಿತು ತನಿಖೆ ನಡೆಸಬೇಕು ಮತ್ತು ಚಿನ್ನಯ್ಯನಿಗೆ ಸೂಕ್ತ ಪೊಲೀಸ್ ಬಂದೋಬಸ್ತು ಒದಗಿಸಿ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಜಯಂತ್ ಟಿ. ಅವರು ಚಿನ್ನಯ್ಯನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದಿಂದ ಜಾಮೀನು ಪಡೆದು ಶಿವಮೊಗ್ಗ ಕಾರಾಗೃಹದಿಂದ ದಿನಾಂಕ: ೧೮.೧೨.೨೦೨೫ ರಂದು ಬಿಡು ಗಡೆಗೊಂಡ ನಂತರ ನೇರವಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ, ವಿಠಲ್ ಗೌಡ ಹಾಗೂ ಸಮೀರ್ ಎಂಡಿ ಇವರಿಂದ ಜೀವ ಬೆದರಿಕೆಯಿದೆ. ಅದುದರಿಂದ ನನಗೆ ಸೂಕ್ತ ರಕ್ಷಣೆ ನೀಡಬೇಕೆಂದು ದೂರಿನ ಮುಖಾಂತರ ಮನವಿ ಮಾಡಿಕೊಂಡಿರುವ ವಿಚಾರ ಮಾಧ್ಯಮದ ಮುಖಾಂತರ ಗೊತ್ತಾಗಿದೆ.


೩೯/೨೦೨೫ ಪ್ರಕರಣದ ಪ್ರಾರಂಭದ ಹಂತದಲ್ಲಿ ಚಿನ್ನಯ್ಯನ ಜೊತೆ ಮಾತುಕತೆಯಿದ್ದು ಆ ನಂತರದ ದಿನಗಳಿಂದ ಇವನಿಂದ ನಮಗೆ ಯಾವುದೇ ರೀತಿಯಲ್ಲಿ ಸಂಪರ್ಕ ನನಗೆ ಇರುವುದಿಲ್ಲ ಹಾಗೂ ಮುಂದಿನ ದಿನಗಳಲ್ಲಿ ಚಿನ್ನಯ್ಯನಿಗೆ ಯಾವುದೇ ರೀತಿಯಲ್ಲಿ ಬೆದರಿಕೆ ಹಾಕುವ ಉzಶ ನನಗೆ ಇರುವುದಿಲ್ಲ. ಹಾಗೆಯೇ ಸಮೀರ್ ಎಂ.ಡಿ. ಕ್ರಿಮಿನಲ್ ದೂರು ಕೊಟ್ಟು ಪ್ರಕರಣವನ್ನು ಹಿಂದೂ ಮುಸ್ಲಿಂ ಮತೀಯ ವಿಚಾರವಾಗಿ ಪರಿವರ್ತನೆಗೊಳಿಸುವ ಹುನ್ನಾರ ಎದ್ದು ಕಾಣುತ್ತಿದೆ. ಅದೇ ಪ್ರಕಾರ ಚಿನ್ನಯ್ಯನಿಗೆ ಯಾರಿಂದಲಾದರೂ ಅಪಾಯ ಉಂಟು ಮಾಡಿ ಅದನ್ನು ಹೋರಾಟಗಾರರಾದ ನಮ್ಮ ಮೇಲೆ ಹಾಕಿ ಆ ಮೂಲಕ ಅನ್ಯಾಯವಾಗಿ ನಮ್ಮನ್ನು ಜೈಲಲ್ಲಿ ಇರಿಸಿ ಸಾಕ್ಷಿ ನಾಶ ಮಾಡಲು ಹಾಗೂ ಪ್ರಕರಣದ ತನಿಖೆಯನ್ನು ಬೇರೆ ದಿಕ್ಕಿಗೆ ತಿರುಗಿಸಲು ದೊಡ್ಡ ಮಟ್ಟದಲ್ಲಿ ಪಿತೂರಿ ನಡೆಯುತ್ತಿರುವುದರಿಂದ ದೂರುದಾರ ಚಿನ್ನಯ್ಯನಿಗೆ ಕೂಡಲೇ ಗನ್ಮ್ಯಾನ್ ಒದಗಿಸಿ ಅವನು ಮತ್ತು ಅವನ ಕುಟುಂಬಕ್ಕೆ ಸೂಕ್ತ ಬಂದೋಬಸ್ತು ಒದಗಿಸಿದಲ್ಲಿ ಎಸ್ಐಟಿಯ ತನಿಖೆಯು ಶೀಘ್ರಗೊಂಡು ಪ್ರಗತಿ ಸಾಧಿಸಲು ಸಾಧ್ಯವಾಗಬಹುದು.
ಆದುದರಿಂದ ಚಿನ್ನಯ್ಯ ನೀಡಿರುವ ದೂರಿನ ಉದ್ದೇಶ ಹಾಗೂ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ದೂರು ನೀಡಲು ಇವರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಒತ್ತಡ ಹಾಕಿ ಅಪರಾಧಿಕ ಪಿತೂರಿ ನಡೆಸಿದವರ ಬಗ್ಗೆ ತನಿಖೆ ನಡೆಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಎಸ್.ಐ.ಟಿ ಕಛೇರಿಯಲ್ಲಿ ಸಹಿ ಹಾಕಿದ ಚಿನ್ನಯ್ಯ: ಶಿವಮೊಗ್ಗ ಜೈಲಿನಿಂದ ಬಿಡುಗಡೆಗೊಂಡ ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಸಿ.ಎನ್. ಸೋಮವಾರ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಬಂದು ಸಹಿ ಹಾಕಿ ತೆರಳಿದ್ದಾನೆ. ಚಿನ್ನಯ್ಯನಿಗೆ ನ್ಯಾಯಾಲಯ ಜಾಮೀನು ನೀಡುವ ಸಂದರ್ಭದಲ್ಲಿ ಪ್ರತೀ ೨ ದಿನಗಳೊಮ್ಮೆ ಎಸ್ಐಟಿ ಕಚೇರಿಗೆ ಹೋಗಿ ಸಹಿ ಹಾಕಬೇಕು ಎಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ೧೧.೩೦ರ ಸುಮಾರಿಗೆ ಆಟೋ ರಿಕ್ಷಾದಲ್ಲಿ ಪತ್ನಿ ಮಲ್ಲಿಕಾ ಜತೆ ಆಗಮಿಸಿ ಸಹಿ ಹಾಕಿ ಅದೇ ರಿಕ್ಷಾದಲ್ಲಿ ತೆರಳಿದ್ದಾನೆ. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಇದು ೨ನೇ ಬಾರಿಗೆ ಎಸ್ಐಟಿ ಕಚೇರಿಗೆ ಬಂದಿರುವುದು ಎನ್ನಲಾಗಿದೆ.
ಜಾಮೀನು ಲಭಿಸಿದ 24 ದಿನಗಳ ಬಳಿಕ ಚಿನ್ನಯ್ಯನಿಗೆ ಜೈಲಿನಿಂದ ಬಿಡುಗಡೆ ಭಾಗ್ಯ
ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿ ಶಿವಮೊಗ್ಗ ಜೈಲು ಸೇರಿದ ಬಳಿಕ ಮಂಗಳೂರು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಮಂಜೂರಾದರೂ ಭದ್ರತಾ ಠೇವಣಿ ನೀಡಲು ಯಾರೂ ಮುಂದೆ ಬಾರದ ಕಾರಣ ಜೈಲಿನಲ್ಲೇ ಉಳಿದಿದ್ದ ಮಂಡ್ಯ ಮೂಲದ ಚಿನ್ನಯ್ಯನಿಗೆ ಡಿ.18ರಂದು ಬೆಳಿಗ್ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಭದ್ರತಾ ಠೇವಣಿ ನೀಡಲು ಪತ್ನಿ ಹಾಗೂ ಸಂಬಂಧಿಗಳು ಒಪ್ಪಿದ್ದರಿಂದ ಡಿ.17ರಂದು ಬೆಳ್ತಂಗಡಿ ಕೋರ್ಟ್ ಬಿಡುಗಡೆಗೆ ಅವಕಾಶ ನೀಡಿತ್ತು. ಗುರುವಾರ ಬೆಳಗ್ಗೆ ಬಿಡುಗಡೆ ಪ್ರಕ್ರಿಯೆಗಳನ್ನು ಪೂರೈಸಿ ಪತ್ನಿ ಮಲ್ಲಿಕಾ ಹಾಗೂ ಸಂಬಂಧಿಗಳು ಚಿನ್ನಯ್ಯನನ್ನು ಶಿವಮೊಗ್ಗ ಜೈಲಿನಿಂದ ಕಾರಿನಲ್ಲಿ ಬೆಳ್ತಂಗಡಿಗೆ ಕರೆ ತಂದಿದ್ದಾರೆ. ಜಾಮೀನು ಮಂಜೂರು ಮಾಡಿದ್ದ ನ್ಯಾಯಾಲಯ 1 ಲಕ್ಷ ರೂ. ಬಾಂಡ್ ಹಾಗೂ ಇಬ್ಬರ ಶೂರಿಟಿ ನೀಡುವಂತೆ ಆದೇಶಿಸಿತ್ತು. ಬಾಂಡ್ ಹಾಗೂ ಶೂರಿಟಿ ನೀಡಲು ಯಾರೂ ಮುಂದೆ ಬಾರದ ಕಾರಣ ಚಿನ್ನಯ್ಯ ಜೈಲಿನಲ್ಲಿಯೇ ಇರುವಂತಾಗಿತ್ತು.








