



ಬೆಳ್ತಂಗಡಿ: ನಡ ಗ್ರಾಮದ ಮಂಚಕಲ್ ನಿವಾಸಿ, ನವೀನ್ ಸಂಜೀವ ಅವರ ಪುತ್ರ ಹಾಗೂ ಡಿ. ಆರ್.ಸಂಜೀವ ಡೊಡಡ್ಕ ಶಿರಾಡಿ ಅವರ ಮೊಮ್ಮಗ ಧೈರ್ಯ ಸಮಾಹಿತ ನವೀನ್ ಅವರು ದಕ್ಷಿಣ ಆಫ್ರಿಕಾದ ಮೊಸೆಲ್ ಬೇಯಲ್ಲಿ ನಡೆಯುವ UIPM ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.


ಕೇಂದ್ರ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಅವರು ಡಿ.8ರಿಂದ ಡಿ.11ರವರೆಗೆ ದ.ಆಫ್ರಿಕಾದ ಮೋಸೆಲ್ ಬೇಯ ಸಂತೊಸ್ ಬೀಚ್‌ನಲ್ಲಿ ವಿಶ್ವದ 32 ರಾಷ್ಟ್ರಗಳ 1800 ಕ್ಕೂ ಹೆಚ್ಚು ಯುವ ಕ್ರೀಡಾಪಟುಗಳ ಜೊತೆ ಸ್ಪರ್ಧಿಸುವಲ್ಲಿ, ಕರ್ನಾಟಕದಿಂದ ಅರ್ಹತೆ ಪಡೆದ ಇಬ್ಬರಲ್ಲಿ ಧೈರ್ಯ ಒಬ್ಬನಾಗಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವನು ಬಯಾಥ್ಲೆ, ಟ್ರಯಾಥ್ಲೆ ಮತ್ತು ಲೇಸರ್ ರನ್ ವಿಭಾಗಗಳಲ್ಲಿ ಸ್ಪರ್ಧಿಸಿದರು. ಇವು ಆಧುನಿಕ ಪೆಂಟಾಥ್ಲಾನ್‌ನ ಅತ್ಯಂತ ದೊಡ್ಡ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಒಂದಾಗಿದೆ.









