



ಉಜಿರೆ: ಅನುಗ್ರಹ ನಿವಾಸಿ ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯ, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಾಜಿ ಉಪಾಧ್ಯಕ್ಷ, ಹಾಲಿ ನಿರ್ದೇಶಕ, ಬಂಟರ ಯಾನೆ ನಾಡವರ ಸಂಘದ ಮಾಜಿ ಅಧ್ಯಕ್ಷ, ಓಡಲ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಲಯನ್ ಎಂ. ಜಿ. ಶೆಟ್ಟಿ (ಎಂ. ಗೋಪಾಲ ಶೆಟ್ಟಿ) (86 ವ) ಅ. 29ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಮೃತರು ಪತ್ನಿ ರುಕ್ಮಿಣಿ ಜಿ. ಶೆಟ್ಟಿ, ಮಕ್ಕಳಾದ ಚಿತ್ರೀಶ್ ಶೆಟ್ಟಿ, ವೃಂದ ಹರಿಪ್ರಕಾಶ್ ಶೆಟ್ಟಿ ಮತ್ತು ಪ್ರಿಯಾ ಜೆ. ಅಡ್ಯಂತಾಯ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಅವರ ಮನೆ ಉಜಿರೆಯಲ್ಲಿ ಅ. 30ರಂದು ಬೆಳಿಗ್ಗೆ 10ಗಂಟೆಗೆ ನಡೆಯಲಿದೆ.
.









