


ಕುತ್ಲೂರು: ಶ್ರೀ ಅನಘ ಮನೆಯ ಕಳ್ಳತನ ಪ್ರಕರಣವನ್ನು ಶೀಘ್ರವಾಗಿ ಭೇದಿಸಿ ಗ್ರಾಮದ ಮಹಿಳೆಯರಿಗೆ ನೆಮ್ಮದಿಯ ವಾತಾವರಣವನ್ನು ಕಲ್ಪಿಸಿ ಕೊಡುವಂತೆ ವೇಣೂರಿನ ಪೊಲೀಸ್ ಠಾಣಾಧಿಕಾರಿಯವರಿಗೆ ಗ್ರಾಮದ ಮಹಿಳೆಯರಿಂದ ಅ.30ರಂದು ಮನವಿ ಸಲ್ಲಿಸಲಾಯಿತು.


ಗ್ರಾಮ ಪಂಚಾಯತ್ ಸದಸ್ಯೆಯರಾದ ಯಶೋಧಾ ನಿತ್ಯಾನಂದ ಪೂಜಾರಿ, ಆಶಾಲತಾ ಮಹಾಬಲ ಪೂಜಾರಿ, ಮಾಜಿ ಸದಸ್ಯೆಯರಾದ ಪ್ರಮೀಳಾ ರಾಮಚಂದ್ರ ಭಟ್, ಸೇವಾ ಪ್ರತಿನಿಧಿ ಉಷಾ ಸಂತೋಷ್, ಸಾಮಾಜಿಕ ಕಾರ್ಯಕರ್ತೆ ಪ್ರಜಾತಾ ಪ್ರಭಾಕರ ಹೆಗ್ಡೆ, ಕುತ್ಲೂರು ಶಾಲಾ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷೆ ಶ್ವೇತಾ ಜಗದೀಶ್ ಉಪಸ್ಥಿತರಿದ್ದರು.









