ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ Lab In Cab ಕಾರ್ಯಕ್ರಮ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು(ಸ್ವಾಯತ್ತ) ಸಸ್ಯಶಾಸ್ತ್ರ ವಿಭಾಗದಿಂದ ಬೆಳ್ತಂಗಡಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ Lab In Cab ಕಾರ್ಯಕ್ರಮವನ್ನು ಅ. 23ರಂದು ಹಮ್ಮಿಕೊಳ್ಳಲಾಯಿತು.

ಶಾಲೆಯ 8 ಹಾಗೂ 9ನೇ ತರಗತಿಯಲ್ಲಿ ಕಲಿಯುತ್ತಿರುವ 86 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು. ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಏಕದಳ ಹಾಗೂ ದ್ವಿದಳ ಸಸ್ಯಗಳ ಕಾಂಡದ ಒಳ ವಿನ್ಯಾಸ ಹಾಗೂ ಸಸ್ಯ ಬಾಷ್ಪೀಕರಣವನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು. ಶಾಲೆಯ ಶಿಕ್ಷಕಿಯರಾದ ನಯನಾ ಹಾಗೂ ಪ್ರೀತಿ ಅವರು ಕಾರ್ಯಕ್ರಮಕ್ಕೆ ಸಹಕಾರವಿತ್ತರು.

ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಭಿಲಾಷ್ ಕೆ.ಎಸ್., ಹಾಗೂ ಭವ್ಯಾ ಡಿ.ನಾಯಕ್, ಕಾರ್ಯಕ್ರಮವನ್ನು ಆಯೋಜಿಸಿದರು. ಸಸ್ಯಶಾಸ್ತ್ರ ವಿಭಾಗದ ಮೇಘಾ, ವಿಭಾಗದ ಸಹಾಯಕ ಸುಂದರ, ವಿದ್ಯಾರ್ಥಿಗಳಾದ ಸಿರೀಶಾ ಶಾಸ್ತ್ರಿ ಹಾಗೂ ಪ್ರೀತಿ ಸಹಕರಿಸಿದರು.

LEAVE A REPLY

Please enter your comment!
Please enter your name here