ಮುಂಡಾಜೆ: ಬಂಟರ ಗ್ರಾಮ ಸಮಿತಿಯಿಂದ ಬಂಟೆರೆ ಕಲಾ ಪರ್ಬ ಆಚರಣೆ

0

ಮುಂಡಾಜೆ: ಬಂಟರ ಗ್ರಾಮ ಸಮಿತಿ ಆಶ್ರಯದಲ್ಲಿ ಬಂಟೆರೆ ಕಲಾ ಪರ್ಬ ಕಾರ್ಯಕ್ರಮ ಅ. 20ರಂದು ನಡೆಯಿತು. ತ್ರಿಷಾ ರೈ, ದಿವ್ಯಶ್ರೀ‌ ಶೆಟ್ಟಿ, ಅಧಿತಿ ಶೆಟ್ಟಿ ಅವರು ನೃತ್ಯ ಕಾರ್ಯಕ್ರಮ, ನಾರಾಯಣ ಶೆಟ್ಟಿ ಮಂಜುಶ್ರೀ ನಗರ ಮಿಮಿಕ್ರಿ ಮತ್ತು ಪಾಡ್ದನ ಕಾರ್ಯಕ್ರಮಗಳನ್ನು ನೀಡಿದರು. ಕಟೀಲು ಮೇಳದ ಯಕ್ಷಗಾನ ಕಲಾವಿದ ಮುಂಡಾಜೆ ನವೀನ್ ಶೆಟ್ಟಿ ನಿರ್ದೇಶನ ಹಾಗೂ ಅಗರಿ ಪುರುಷೋತ್ತಮಶೆಟ್ಟಿ ಸಂಯೋಜನೆಯಲ್ಲಿ ತುಳುನಾಡ ಬಲಿಯೇಂದ್ರ ಎನ್ನುವ ತುಳು ಯಕ್ಷಗಾನ ಕಾರ್ಯಕ್ರಮ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಅಗರಿ ಪುರುಷೋತ್ತಮ ಶೆಟ್ಟಿ ಮತ್ತು ನಾರಾಯಣ ಶೆಟ್ಟಿ ಮಂಜುಶ್ರಿನಗರ, ಮದ್ದಳೆ ಪುರಂದರ ಧರ್ಮಸ್ಥಳ, ಚೆಂಡೆ ಹರೀಶ್ ಚಾರ್ಮಾಡಿ, ಚಕ್ರತಾಳ ಪವನ್ ಚಾರ್ಮಾಡಿ ಹಾಗೂ ಮುಮ್ಮೆಳದಲ್ಲಿ ನವೀನ್ ಶೆಟ್ಟಿ ಮುಂಡಾಜೆ, ಚಿತ್ರಿತಾ ನವೀನ್ ಶೆಟ್ಟಿ, ನವೀತ್ ಶೆಟ್ಟಿ ನೆಯ್ಯಾಲು, ರಂಜೀತ್ ಶೆಟ್ಟಿ ನೆಯ್ಯಾಲು, ಹರ್ಷೀತ್ ಶೆಟ್ಟಿ ನೆಯ್ಯಾಲು ಅವರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಅಧ್ಯಕ್ಷ ಪ್ರದೀಪ್ ಶೆಟ್ಟಿ ನಾಗಂಡ ಅವರು ಸಂಘಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಅಗರಿ ರಾಮಣ್ಣ ಶೆಟ್ಟಿ, ಉಜಿರೆ ವಲಯ ಸಮಿತಿಯ ಅಧ್ಯಕ್ಷೆ ವನಿತಾ ಶೆಟ್ಟಿ, ಕಾರ್ಯದರ್ಶಿ ಸುದೇಶ್ ಶೆಟ್ಟಿ, ಪದಾಧಿಕಾರಿಗಳಾದ ವೆಂಕಟರಮಣ ಶೆಟ್ಟಿ ಕಲ್ಮಂಜ, ಜಯರಾಮ ಶೆಟ್ಟಿ ಕೆಂಬರ್ಜೆ, ರಾಧಾಕೃಷ್ಣ ಶೆಟ್ಟಿ ಕುಂಟಿನಿ, ವಿಶ್ವನಾಥ ಶೆಟ್ಟಿ, ಮುಂಡ್ರುಪಾಡಿ, ಚಂದ್ರಲತಾ ಶೆಟ್ಟಿ ಅಗರಿ ಅವರು ಉಪಸ್ಥಿತರಿದ್ದರು. ಭವ್ಯ ರೈ ಅಗರಿ ಅವರು ಸ್ವಾಗತಿಸಿ, ತ್ರಿಶಾ ರೈ ಕಲ್ಲ ಹಿತ್ತಿಲು ನಿರೂಪಿಸಿದರು. ಗ್ರಾಮ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲಾ ಬಂಟ ಬಂಧುಗಳು ಸಹಕಾರ ನೀಡಿದರು. ಮಧು ಶೆಟ್ಟಿ ಹುರ್ತಾಜೆ ಅವರ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here