ನೆರಿಯ: ಗ್ರಾಮದ ಹರೀಶ್ ವಿ. ಅವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಹಾನಿಗೊಂಡ ಹಿನ್ನೆಲೆಯಲ್ಲಿ ಅ.7ರಂದು ಶಾಸಕ ಹರೀಶ್ ಪೂಂಜ ಭೇಟಿ ನೀಡಿ ತಾತ್ಕಾಲಿಕವಾಗಿ ವಾಸ್ತವ್ಯವಿರಲು ಮನೆಯ ವ್ಯವಸ್ಥೆಯನ್ನು ಮತ್ತು ಮುಂದಿನ ಮನೆ ನಿರ್ಮಾಣದ ಕುರಿತು ಸ್ಥಳೀಯ ಕಾರ್ಯಕರ್ತರೊಂದಿಗೆ ಚರ್ಚಿಸುದರು.
ವೈಯಕ್ತಿಕ ಧನಸಹಾಯವನ್ನು ನೀಡಿ ಧೈರ್ಯ ತುಂಬಿದರು. ಬಿ.ಜೆ.ಪಿ ಮಹಾಶಕ್ತಿ ಕೇಂದ್ರ ಪ್ರಮುಖ ಬಾಬು ಗೌಡ ಪರ್ಪಳ, ಶಕ್ತಿ ಕೇಂದ್ರ ಪ್ರಮುಖ ವಿಶ್ವನಾಥ ಅಣಿಯೂರು, ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಸಜಿತ, ಸದಸ್ಯ ಕುಶಲ, ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಆರ್.ಎಸ್.ಎಸ್. ಪ್ರಮುಖರಾದ ಶಿವಪ್ರಸಾದ್ ಸುರ್ಯ, ಸುದರ್ಶನ್ ಕನ್ಯಾಡಿ, ರಾಜೇಶ್ ತೋಟತ್ತಾಡಿ, ಅಕ್ಷಯ್ ಅಣಿಯೂರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.