ಕಲ್ಮಂಜ: ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮೊಗ್ರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ. 13ರಂದು ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ ಗೌತಮಿ ಸಾಂಪ್ರದಾಯಿಕ ಯೋಗ ಸ್ಪರ್ಧೆ ಮತ್ತು ಆರ್ಟಿಸ್ಟಿಕ್ ಯೋಗ ಸ್ಪರ್ಧೆಯಲ್ಲಿ ಪ್ರಥಮ, ಮನ್ವಿತಾ ಆರ್ಟಿಸ್ಟಿಕ್ ಯೋಗ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಸಾಂಪ್ರದಾಯಿಕ ಯೋಗ ಸ್ಪರ್ಧೆಯಲ್ಲಿ
ತೃತೀಯ, ಪ್ರಾಚಿ ಮತ್ತು ದೀಪಶ್ರೀ ಆರ್ಟಿಸ್ಟಿಕ ಡಬಲ್ಸ್ ನಲ್ಲಿ ದ್ವಿತೀಯ, ಶಿವಾನಿ ಮತ್ತು ವಿಜಿತಾ ರಿದಮಿಕ್ ಡಬಲ್ಸ್ ನಲ್ಲಿ ತೃತೀಯ, ಹರಿಶ್ಚಂದ್ರ ಮತ್ತು ನಿಶ್ಚಲ್ ಆರ್ಟಿಸ್ಟಿಕ್ ಡಬಲ್ಸ್ ನಲ್ಲಿ ಪ್ರಥಮ
ಶಂಕಿತ್ ಮತ್ತು ಧನುಷ್ ರೈ ರಿದಮಿಕ್ ಡಬಲ್ಸ್ ನಲ್ಲಿ ಪ್ರಥಮ, ಹರಿಶ್ಚಂದ್ರ ಸಾಂಪ್ರದಾಯಿಕ ಸಿಂಗಲ್ಸ್ ನಲ್ಲಿ ದ್ವಿತೀಯ, ಆರ್ಟಿಸ್ಟಿಕ್ ಸಿಂಗಲ್ಸ್ ನಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಯೋಗಪಟುಗಳಿಗೆ ತರಬೇತಿ ನೀಡಿ ಪ್ರೇಮಲತಾ ಹಾಗೂ ವಸಂತಿ ಸಹಕರಿಸಿರುತ್ತಾರೆ.