ಮೂಡುಕೋಡಿ: ಉಂಬೆಟ್ಟ ಸ.ಉ.ಪ್ರಾ. ಶಾಲೆಯಲ್ಲಿ ಸೆ.16ರಂದು ಎಂ.ಆರ್.ಪಿ.ಎಲ್. ಕಂಪನಿಯ 2024-25ನೇ ಸಾಲಿನ ಆರ್ಥಿಕ ವರ್ಷದ ಸಿ.ಎಸ್ಆರ್ ಅನುದಾನ ರೂ.10 ಲಕ್ಷ ಸಹಾಯದಿಂದ ನಿರ್ಮಾಣಗೊಂಡಿರುವ ಉತ್ತಮ ಸುಸಜ್ಜಿತ ಬಾಲಕ ಮತ್ತು ಬಾಲಕಿಯರ ಶೌಚಾಲಯದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ವೇಣೂರು ಸಹಕಾರ ಸಂಘದ ಅಧ್ಯಕ್ಷ, ಸುಂದರ್ ಹೆಗ್ಡೆ, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು, ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜೇಶ್ ಪೂಜಾರಿ ಕೊಪ್ಪದ ಬಾಕಿಮಾರು, ವೀಣಾ ದೇವಾಡಿಗ, ನಿವೃತ್ತ ಶಿಕ್ಷಕಿ ಜೆಸಿಂತಾ ಬ್ರಾಗ್ಸ್, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಧನಂಜಯ ಜೈನ್, ಉಪಾಧ್ಯಕ್ಷ, ಸದಸ್ಯರು, ಪೋಷಕರು ವೃಂದ, ಅಧ್ಯಾಪಕ ವೃಂದ, ಅಡುಗೆ ಸಿಬ್ಬಂದಿ ಹಾಗೂ ಹಳೆವಿದ್ಯಾರ್ಥಿಗಳು, ವಿದ್ಯಾರ್ಥಿ – ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಶೌಚಾಲಯ ನಿರ್ಮಾಣದಲ್ಲಿ ಸಹಕರಿಸಿರುವ ಹರೀಶ್ ಪೂಜಾರಿ, ರಾಜು ಮೇಸ್ತ್ರಿ, ಮನೋಹರ ಹೆಗ್ಡೆ, ವಿಜೇತ್, ಪ್ರಕಾಶ್ ಹೆಗಡೆ, ನಾಸರ್ ಎ.ಕೆ., ಹರೀಶ್ ಆಚಾರ್ಯ, ಯಶೋಧರ ಪೂಜಾರಿ, ಎಲ್ಯಣ್ಣ ಪೂಜಾರಿ ಅವರನ್ನು ಗೌರವಿಸಲಾಯಿತು. ಮುಖ್ಯೋಪಾಧ್ಯಾಯಿನಿ ವಿನೋದ ಸ್ವಾಗತಿಸಿ, ಸಹಶಿಕ್ಷಕಿ ಸುನಂದಾ ನಿರೂಪಿಸಿ, ಸಹಶಿಕ್ಷಕ ರವಿ ಕುಮಾರ್ ವಂದಿಸಿದರು.