ಶಿಬಾಜೆ: ಶಾಲೆಯ ಮಕ್ಕಳಿಗೆ ಓಣಂ ಹಬ್ಬದ ಪ್ರಯುಕ್ತ ವಿಶೇಷ ಊಟ ನೀಡಿದ ಯುವಕರ ತಂಡ

0

ಶಿಬಾಜೆ: ಓಣಂ ಹಬ್ಬದ ದಿನದಂದು ರಜೆ ಇದ್ದುದರಿಂದ ಸೆ.6ರಂದು ಶಾಲೆಗೆ ಬಂದ ಮಕ್ಕಳಿಗೆ ಖುಷಿಯೋ ಖುಷಿ ಮದ್ಯಾಹ್ನ ಊಟಕ್ಕೆ ಮಕ್ಕಳಿಗೆ ವಿವಿಧ ಬಗೆಯ ರುಚಿ ರುಚಿಯಾದ ಅಡುಗೆಯನ್ನು ಶಿಬಾಜೆ ಗ್ರಾಮದ ರಾಜು ಕೆ., ಜಿನ್ಸ್ ಓ.ಜೆ., ಜಯರಾಜ್, ವಿನೋದ್ ಟಿ.ಎ. ಮೊದಲಾದವರು ತಮ್ಮ ಮನೆಯಲ್ಲಿ ಶುಚಿಯಾಗಿ ರುಚಿಯಾಗಿ ತಯಾರಿಸಿದ ಭಕ್ಷ್ಯವನ್ನು ಮಕ್ಕಳಿಗೆ ಬಾಳೆ ಎಲೆ ಹಾಕಿ ಸಾಂಪ್ರದಾಯಿಕವಾಗಿ ಉಣಬಡಿಸಿದರು.

ಮಕ್ಕಳು ಖುಷಿಯಿಂದ ಭೋಜನ ಸ್ವೀಕರಿಸಿ ಓಣಂ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಇವರಿಗೆ ಶಿಶಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ ಸಹಕರಿಸಿದರು.

LEAVE A REPLY

Please enter your comment!
Please enter your name here