ಲಾಯಿಲ: ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಸೆ.1 ರಂದು ಲಾಯಿಲ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ.ಕೆ. ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಅಕ್ಷರದಾಸೋಹ ಸಹಾಯಕ ನಿರ್ದೇಶಕ ರಾಜೇಂದ್ರ ಕೃಷ್ಣ ಅವರು ಗ್ರಾಮ ಸಭೆಯನ್ನು ಮುನ್ನಡೆಸಿದರು. ಪಂಚಾಯತ್ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್ ಪಂಚಾಯತ್ ಸದಸ್ಯರಾದ ಆಶಾ ಬೆನಡಿಕ್ಟ ಸಲ್ಡಾನ, ಗಣೇಶ್ ಆರ್, ಹರಿಕೃಷ್ಣ, ದಿನೇಶ್ ಶೆಟ್ಟಿ, ಪ್ರಸಾದ್ ಶೆಟ್ಟಿ, ರಜನಿ ಎಂ.ಆರ್., ಸವಿತಾ ಶೆಟ್ಟಿ , ಚಿದಾನಂದ ಶೆಟ್ಟಿ, ಆಶಾಲತಾ, ಮರಿಯಮ್ಮ, ಮಹೋನ್ ದಾಸ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಡಿ.ಪಿ.ಸ್ವಾಗತಿಸಿ, ಸಿಬ್ಬಂದಿ ಮೋಹನ್ ಲೆಕ್ಕಪತ್ರಗಳನ್ನು ಮಂಡನೆ ಮಾಡಿದರು.