ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ 69ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಸಂದರ್ಭ ಸೆ.1ರಂದು ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ ವಿಮಾ ಸಪ್ತಾಹ ಉದ್ಘಾಟನೆಗೊಂಡಿತು. ಶಾಖೆಯ ಪ್ರಥಮ ಗ್ರಾಹಕ ನಿವೃತ್ತ ಸೈನಿಕ ಗುರುವಾಯನಕೆರೆ ಜಾನ್ ಮಿನೇಜಸ್ ಉದ್ಘಾಟಿಸಿದರು. ಶಾಖಾಧಿಕಾರಿ ಕೆ. ಪ್ರಕಾಶ್ ಸಂಸ್ಥೆ 68 ವರ್ಷಗಳಿಂದ ಮಾಡುತ್ತಿರುವ ಗ್ರಾಹಕರ ಸೇವೆ, ಸಾಧನೆಯ ಕುರಿತು ವಿವರಿಸಿದರು. ದೇಶದ ಅಗ್ರಗಣ್ಯ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ ಆರ್ಥಿಕ ವರ್ಷದಲ್ಲಿ ದೇಶದಲ್ಲಿಯೇ ಅತೀ ಹೆಚ್ಚು ಪಾಲಿಸಿಯೊಂದಿಗೆ ಪ್ರೀಮಿಯಂ ಸಂಗ್ರಹಿಸಿ ದೇಶದ ಅಗ್ರಗಣ್ಯ ವಿಮಾ ಸಂಸ್ಥೆಯಾಗಿದೆ ಒಂದು ವಾರ ನಡೆಯುವ ವಿಮಾ ಸಪ್ತಾಹದಲ್ಲಿ ಎಲ್ಲಾ ಪ್ರತಿನಿಧಿಗಳು, ಗ್ರಾಹಕರು ತೊಡಗಿಸಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಗ್ರಾಹಕ ನಿವೃತ್ತ ಸರಕಾರಿ ನೌಕರ ವಸಂತ ಸುವರ್ಣ ಲಾಯಿಲ ವಿಮಾ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಇನ್ನೊರ್ವ ಗ್ರಾಹಕ ನಿತ್ಯಾನಂದ ಗುರುವಾಯನಕೆರೆ, ಅಭಿವೃದ್ಧಿ ಅಧಿಕಾರಿಗಳಾದ ಎಂ.ವಿ. ಶೆಟ್ಟಿ ಉದಯ ಶಂಕರ್, ವಿನಯ ಕುಮಾರ್, ಸಂದೀಪ್, ಆಡಳಿತ ವಿಭಾಗದ ಸಿಬ್ಬಂದಿ ಹರಿಶ್ಚಂದ್ರ ಹೆಗ್ಡೆ, ಕೇಶವ ಎಂ., ವಿಮಾ ಪ್ರತಿನಿಧಿಗಳು, ಸಲಹೆಗಾರರು, ಗ್ರಾಹಕರು ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಟಿ. ಡಿ. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಆಡಳಿತಾಧಿಕಾರಿ ಗಳಾದ ಹರಿಶ್ಚಂದ್ರ ಹೆಗ್ಡೆ, ಕೇಶವ ಎಂ. ಇವರನ್ನು ಗೌರವಿಸಲಾಯಿತು.