ಉಜಿರೆ: ಧನ್ವಂತರಿ ಚಿಕಿತ್ಸಾಲಯ ಶುಭಾರಂಭ; ಆರೋಗ್ಯ ಭಾಗ್ಯವೇ ಶ್ರೇಷ್ಠ ಸಂಪತ್ತು: ಶರತ್ ಕೃಷ್ಣ ಪಡುವೆಟ್ನಾಯ

0

ಉಜಿರೆ: ಎಲ್ಲ ಸಂಪತ್ತು, ಸೌಭಾಗ್ಯಗಳಿಗಿಂತ ಆರೋಗ್ಯಭಾಗ್ಯವೇ ಶ್ರೇಷ್ಠ ಸಂಪತ್ತು. ಈಗ ಜನರಲ್ಲಿ ಆರೋಗ್ಯದ ಬಗೆಗೆ ಕಾಳಜಿ,ಜಾಗೃತಿ ಮೂಡಿದೆ. ಆರೋಗ್ಯದ ಬಗೆಗೆ ಮಾರ್ಗದರ್ಶನ ನೀಡಿ ರೋಗ ಮೂಲಕ್ಕೆ ಶಾಶ್ವತ ಪರಿಹಾರ ನೀಡುವ ಆಯುರ್ವೇದ ಚಿಕಿತ್ಸೆಯಿಂದ ರೋಗಿಗಳಿಗೆ ಒಳ್ಳೆಯ ರೀತಿಯ ಚಿಕಿತ್ಸೆ ದೊರೆಯುವಂತಾಗಲಿ.. ವೈದ್ಯಕೀಯ ಶಿಕ್ಷಣ ಪಡೆದು ಸ್ವಂತ ಊರಿನಲ್ಲೇ ಗ್ರಾಮೀಣ ರೋಗಿಗಳ ಸೇವೆ ನೀಡಲು ದಂಪತಿಗಳು ಮುಂದಾಗಿರುವುದು ಯುವಕರಿಗೆ ಮಾದರಿಯಾಗಿದೆ ಎಂದು ಉಜಿರ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ ಶರತ್ ಕೃಷ್ಣ ಪಡುವೆಟ್ನಾಯರು ಹೇಳಿದರು.

ಅವರು ಆ. 28ರಂದು ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡ ದಲ್ಲಿ ನೂತನವಾಗಿ ಆರಂಭಗೊಂಡ ಆಯುರ್ವೇದ “ಧನ್ವಂತರಿ ಚಿಕಿತ್ಸಾಲಯ” ವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿ ಉಜಿರೆ ಸೊಸೈಟಿ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು ಅರೋಗ್ಯ ಏರುಪೇರಾದಾಗ ಎಚ್ಚರಿಕೆ ವಹಿಸಿ ವೈದ್ಯರ ಬಳಿ ಹೋಗುವುದಕ್ಕಿಂತ ರೋಗ ಬರುವ ಮೊದಲೇ ನಮ್ಮ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳುವುದು ಮುಖ್ಯ. ನೂತನ ಚಿಕಿತ್ಸಾಲಯ ಉತ್ತರೋತ್ತರ ಅಭಿವೃದ್ಧಿಯಾಗಿ ಗ್ರಾಮೀಣ ಜನರ ಆರೋಗ್ಯ ಸೇವೆಯಲ್ಲಿ ಯಶಸ್ವಿಯಾಗಲಿ ಎಂದರು. ಉಚಿರ ಗ್ರಾ.ಪಂ.ಅಧ್ಯಕ್ಷೆ ಉಷಾಕಿರಣ್ ಕಾರಂತ್‌ ನಗರ ಪಂಚಾಯತ್ ಆಗಲು ದಾವುಗಾಲಿಡುತ್ತಿರುವ ಉಜಿರೆಯಲ್ಲಿ ಆಯುರ್ವೇದ ವೈದ್ಯರು ವಿರಳವಾಗಿದ್ದು ಜನರ ಒಲವೂ ದೇಹ ಪ್ರಕೃತಿಗೆ ಹೊಂದಿಕೊಂಡಿರುತ್ತದೆ ವೈದ್ಯ ದಂಪತಿ ನಗರ ದತ್ತ ಮುಖ ಮಾಡದೆ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸೇವೆಗೆ ಮುಂದಾಗಿರುವುದು ಅಭಿನಂದನೀಯ ಎಂದು ಶುಭ ಹರಿಸಿದರು.

ಧನ್ವಂತರಿ ಚಿಕಿತ್ಸಾಲಯದ ಡಾ |ನಂದೀಪ ಆಚಾರ್ ಸ್ವಾಗತಿಸಿ ಪ್ರಸ್ತಾವಿಸಿ ಎಲ್ಲದೆ ಸಹಕಾರ ಕೋರಿದರು. ಡಾ!’ ಸುರೇಖಾ ಸಂದೀಪ್ ಅತಿಥಿಗಳನ್ನು ಗೌರವಿಸಿದರು. ಸೊಸೈಟಿ ಸಿಬಂದಿ ಮೋಹನ ಗೌಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸುರೇಶ ಆಚಾರ್. ನಿರ್ಮಲ ಸುರೇಶ ಆಚಾ‌ರ್, ಸ್ನೇಹ ಮತ್ತು ಗುರುರಾಜ ಆಚಾರ್, ಹರೀಶ್ ಕಾವ, ಶ್ರೀನಿವಾಸ ಗೌಡ, ಸೀತಾರಾಮ ಶೆಟ್ಟಿ ಕೆಂಬರ್ಜೆ ಜಯರಾಮ ಶೆಟ್ಟಿ ಕಂಬರ್ಜೆ, ರವಿ ಚೆಕ್ಕಿತ್ತಾಯ, ಸುರೇಶ ಗೌಡ, ಅರವಿಂದ ಕಾರಂತ್, ರಜತ್ ಮಯ್ಯ, ಜ್ಯೋತಿ ಚಕ್ಕಿತ್ತಾಯ.ಸರೋಜಾ ಕದಿಲಾಯ ಲಕ್ಷ್ಮೀನಾರಾಯಣ ರಾವ್ ಶಶಿಕಲಾ ಮೊದಲಾದವರು ಶುಭ ಕೋರಿದರು.

LEAVE A REPLY

Please enter your comment!
Please enter your name here