
ಲಾಯಿಲ: ಸಾರ್ವಜನಿಕ ಸಮಿತಿ ವತಿಯಿಂದ 37ನೇ ವರ್ಷದ ಅ ಗಣೇಶೋತ್ಸವ ಕುತ್ಯಾರು ಶ್ರೀ ಐತಾಳ ಬೆಳ್ತಂಗಡಿ ಅವರ ಪೌರೋಹಿತ್ಯದಲ್ಲಿ ಆ.27ರಿಂದ 29ರವರೆಗೆ ಲಾಯಿಲ ಶ್ರೀ ವಿಶ್ವೇಶ್ವರ ಕಲಾ ಮಂದಿರದಲ್ಲಿ ನಡೆಯಲಿದೆ.
ಆ.27ರಂದು ಬೆಳಿಗ್ಗೆ ಪುಣ್ಯಾಹ ಕಲಶ, ತೋರಣ ಮುಹೂರ್ತ, ಉತ್ಸವದ ಉದ್ಘಾಟನೆ, ಕುಣಿತ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಣಹೋಮ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 5ರಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಭಕ್ತಿಗೀತೆ, ದೇಶ ಭಕ್ತಿಗೀತೆ ಸ್ಪರ್ಧೆ ನಡೆಯಲಿದೆ. ರಾತ್ರಿ 8ರಿಂದ ಕರ್ನೋಡಿ, ಪಡ್ಲಾಡಿ ಶಾಲಾ ಮಕ್ಕಳ ನೃತ್ಯ ಕಾರ್ಯಕ್ರಮ ಮತ್ತು ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ಆ.28ರಂದು ಬೆಳಿಗ್ಗೆ ಗಣಹೋಮ, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ
ನಡೆದು ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 9 ರಿಂದ ಓಂ ಶಕ್ತಿ ಗೆಳೆಯರ ಬಳಗ ಲಾಯಿಲ ಇವರಿಂದ ಬ್ರಹ್ಮಗಂಟ್ ತುಳುನಾಟಕ ನಡೆಯಲಿದೆ.
ಆ.29 ಬೆಳಿಗ್ಗೆ ಗಣಹೋಮ ನಡೆದು ಕರ್ನೋಡಿ, ಪಡ್ಲಾಡಿ, ಪುತ್ರಬೈಲು, ಕನ್ನಾಜೆ, ಹಂದೇವೂರು ಕೊಪ್ಪದಬೈಲು ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ನೃತ್ಯ ವೈವಿಧ್ಯ ನಡೆಯಲಿದೆ.
ಸಂಜೆ ಗಂಟೆ 5 ಕ್ಕೆ ಮಹಾಪೂಜೆ ನಡೆದು ತದನಂತರ ಬಲಮುರಿ ವಿಶ್ವೇಶ್ವರ ವೈಭವ ಪೂರ್ಣ ಶೋಭಾಯಾತ್ರೆ ವಿವಿಧ ಭಜನಾ ತಂಡ, ವೇಷ ಭೂಷಣಗಳೊಂದಿಗೆ ಶ್ರೀ ವಿಶ್ವೇಶ್ವರ ಕಲಾ ಮಂದಿರದಿಂದ ಹೊರಟು ಬೆಳ್ತಂಗಡಿಯ ರಾಜಬೀದಿಯಲ್ಲಿ ಸಾಗಿ ಬಂದು ಶ್ರೀ ರಾಘವೇಂದ್ರ ಮಠದ ಬಳಿ ಇರುವ ಗಣಪತಿ ಕಟ್ಟೆಯಲ್ಲಿ ವಸಂತ ಪೂಜೆಗೊಂಡು ಪವಿತ್ರ ಸೋಮಾವತಿ ನದಿಯಲ್ಲಿ ವಿಗ್ರಹದ ವಿಸರ್ಜನೆಯು ಜರಗಲಿರುವುದು ಎಂದು ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿ ತಿಳಿಸಿದ್ದಾರೆ.