
ಧರ್ಮಸ್ಥಳ: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ನಡೆಸಿದ ನಡೆಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆ ಜೂನಿಯರ್ ಗ್ರೇಡ್‌ನಲ್ಲಿ ಮನ್ವಿತಾ ಅವರು ಶೇಕಡಾ 92.25 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಶ್ಯಾಮಲಾ ನಾಗರಾಜ್ ಕುಕ್ಕಿಲ ರವರ ಶಿಷ್ಯೆ ಆಗಿರುವ ಇವರು ಉಜಿರೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸ್ತುತ ಇವರು ತಂದೆ ಕಿಶೋರ್ ಹೆಬ್ಬಾರ್ ಹಾಗೂ ತಾಯಿ ವತ್ಸಲಾ ಅವರೊಂದಿಗೆ ಧರ್ಮಸ್ಥಳದಲ್ಲಿ ನೆಲೆಸಿದ್ದಾರೆ.