
ಶಿಬಾಜೆ: ಗ್ರಾಮದ ಮೊಂಟೆತ್ತಡ್ಕ ನಿವಾಸಿ ಹೊನ್ನಪ್ಪ ಪೂಜಾರಿ ಮೇಸ್ತ್ರಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು ಆಚಾನಕ್ ಆಗಿ ಆರೋಗ್ಯದಲ್ಲಿ ಏರುಪೇರುಗೊಂಡು ಕಾಯಿಲೆಗೆ ಒಳಗಾಗಿದ್ದು ಪ್ರಸ್ತುತ ಮಂಗಳೂರಿನಲ್ಲಿ ಎಂ.ಐ.ಓ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಡುವೆ ಒಂದು ಬಾರಿ ಶಸ್ತ್ರ ಚಿಕಿತ್ಸೆ ನಡೆದಿದ್ದು ಸುಮಾರು 2.5ಲಕ್ಷ ಖರ್ಚು ಆಗಿದ್ದು ಮುಂದಿನ ಚಿಕಿತ್ಸೆಗೆ ಸುಮಾರು 8ಲಕ್ಷ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮನೆಯವರು ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ. ಹೊನ್ನಪ್ಪ ಪೂಜಾರಿಯವರ ಚಿಕಿತ್ಸೆಗೆ ಕುಟುಂಬದವರು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದು ಸಹೃದಯಿ ದಾನಿಗಳು ನೆರವು ನೀಡಿ ಸಹಕರಿಸಬೇಕೆಂದು ಕುಟುಂಬ ಸದಸ್ಯರು ಮತ್ತು ಸ್ಥಳೀಯರು ಕೇಳಿಕೊಳ್ಳುತ್ತಿದ್ದಾರೆ.