
ನಾವೂರು: ವಿಶ್ವ ಹಿಂದೂ ಪರಿಷತ್ ಇಂದಬೆಟ್ಟು-ನಾವೂರು ವತಿಯಿಂದ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಆ.27 ರಂದು ವೆ.ಮೂ. ಆನಂದ ಭಟ್‌ರವರ ಪೌರೋಹಿತ್ಯದಲ್ಲಿ ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಆ.27ರಂದು ಬೆಳಿಗ್ಗೆ ನಾವೂರು ಪೇಟೆಯಿಂದ ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನಕ್ಕೆ ಭಜನೆ ಮೂಲಕ ಶ್ರೀ ಮಹಾಗಣಪತಿ ದೇವರ ವಿಗ್ರಹ ಮೆರವಣಿಗೆ ಮೂಲಕ ತರಲಾಗುವುದು. ನಂತರ ಧ್ವಜಾರೋಹಣ, ಉತ್ಸವದ ಉದ್ಘಾಟನೆ, ವಂದೇ ಮಾತರಂ ಪ್ರತಿಷ್ಠಾಪನೆ, ಗಣಹೋಮ ನಡೆಯಲಿದೆ.
ಮಧ್ಯಾಹ್ನ 12-00ಕ್ಕೆ ಧಾರ್ಮಿಕ ಸಭೆಕಾರ್ಯಕ್ರಮ ನಡೆಯಲಿದೆ. ನಂತರಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ 3 ಗಂಟೆಗೆ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ. ಸಂಜೆ 6ರಿಂದ ರಂಗಪೂಜೆ, ಪ್ರಸಾದ ವಿತರಣೆ ನಡೆದು ಸಂಜೆ 7ರಿಂದ ಇಂದಬೆಟ್ಟು ಹಾಗೂ ನಾವೂರು ಗ್ರಾಮದ ಎಲ್ಲಾ ಭಜನಾ ತಂಡಗಳ ನೃತ್ಯ ಭಜನೆಯ ದೇವರ ವೈಭವದ ಶೋಭಾಯಾತ್ರೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಧರ್ಣಪ್ಪ ಮೂಲ್ಯ ತಿಳಿಸಿದ್ದಾರೆ.