
ಬೆಳ್ತಂಗಡಿ: ಕೊಕ್ಕಡ ಗ್ರಾಮದ ಕಲಾಯಿ ನಿವಾಸಿ ಗಣೇಶ್ ಗೌಡ ಕೆ , ಎಂಬುವವರ ಪೋಟೋವನ್ನು ದುರುಪಯೋಗ ಮಾಡಿ “ಭೀಮ ಬಿ ನಾಯಕ್” ಎಂಬ ನಕಲಿ ಫೇಸ್ಬುಕ್ ಪೇಜ್ ನಲ್ಲಿ ಸತ್ಯಕ್ಕೆ ದೂರವಾದ ವಿಚಾರವನ್ನು ಹಾಕಿರುವ ಬಗ್ಗೆ ಮಂಗಳೂರು ಸೈಬರ್ ಕ್ರೈಮ್ ಗೆ ಆ. 23 ರಂದು ಗಣೇಶ್ ಗೌಡ ಕಲಾಯಿ ದೂರು ನೀಡಿದ್ದಾರೆ.ಪೊಲೀಸರು ದೂರು ಸ್ವೀಕರಿಸಿ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ ಎಂದು ದೂರುದಾರ ಗಣೇಶ್ ಗೌಡ ಕಲಾಯಿ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ ಈ ಹಿಂದೆ 2023ರಿಂದಲೂ ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇದೇ ರೀತಿ ಫೋಟೋ ಬಳಸಿ ಅವಹೇಳನವಾಗಿ ಬರೆದಿದ್ದು ಈ ಬಗ್ಗೆಯೂ ಹಿಂದೆ ದೂರು ನೀಡಿದ್ದು ಆದರೂ ಇಂತಹ ಘಟನೆ ಪದೇ ಪದೇ ನಡೆಯುತ್ತಿದೆ ತಕ್ಷಣ ಈ ಕೃತ್ಯ ಎಸಗಿದವರನ್ನು ಬಂಧಿಸಬೇಕು ಎಂದು ಗಣೇಶ್ ಗೌಡ ತಿಳಿಸಿದ್ದಾರೆ.