ಆ.26-28: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯಿಂದ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವ

0

ಬೆಳ್ತಂಗಡಿ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಂದ 28ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವ ಕಾರ್ಯಕ್ರಮ ಆ.26ರಿಂದ 28ರವರೆಗೆ ಶ್ರೀ ಕ್ಷೇತ್ರ ತಿಮರೋಡಿ ಕುಂಜರ್ಪ ವಠಾರದಲ್ಲಿ ನಡೆಯಲಿದೆ.ಆ.26ರಂದು ಬೆಳಿಗ್ಗೆ ಸಾಮೂಹಿಕ ಗೌರಿ ಪೂಜೆ, ಮಧ್ಯಾಹ್ನ ಮಹಾಪೂಜೆ ನಂತರ ಸಾಮೂಹಿಕ ಅನ್ನಸಂತರ್ಪಣೆ, ಸಂಜೆ 6ರಿಂದ ಸಾಮ ಪಾರಾಯಣ, ಸಂಜೆ 8ರಿಂದ ಮಣಿ ಕೋಟೆಬಾಗಿಲು ನಿರ್ದೇಶನದ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸುವ ತುಳು ಹಾಸ್ಯಮಯ ನಾಟಕ ಕದಂಬ ನಡೆಯಲಿದೆ.

ಆ.27 ಬೆಳಿಗ್ಗೆ ಗಣಪತಿ ಮೂರ್ತಿ ಪ್ರತಿಷ್ಠೆ, ಗಣಹೋಮ, ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆದು ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆದು ಗಾನ ನೃತ್ಯ ಅಕಾಡೆಮಿ ತಂಡ ಮಂಗಳೂರು ಇವರಿಂದ ಗುರು ವಿದ್ಯಾ ಶ್ರೀ ರಾಮಕೃಷ್ಣ ನಿರ್ದೇಶನ ನೃತ್ಯ ಸಂಗಮ ನಡೆಯಲಿದೆ. ಸಂಜೆ 4 ಗಂಟೆಗೆ ಭಜನಾ ಕಾರ್ಯಕ್ರಮ ನಡೆದು ಮಹಾಪೂಜೆ ನಡೆಯಲಿದೆ. ಸಂಜೆ 8ರಿಂದ ಬ್ರಹ್ಮರಕ್ಕಸೆ ಎಂಬ ತುಳು ನಾಟಕ ನಡೆಯಲಿದೆ.

ಆ.28 ರಂದು ಬೆಳಿಗ್ಗೆ ಪೂಜೆ, ನಂತರ 108 ತೆಂಗಿನಕಾಯಿ ಗಣಹೋಮ, ಬೆಳಿಗ್ಗೆ 10-30 ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಝೀ ಕನ್ನಡ ಡ್ಯಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಜಿತೇಶ್ ಕುಮಾರ್ ನೇತೃತ್ವದ ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿ ತಂಡದಿಂದ ನೃತ್ಯ ವೈಭವ ನಡೆಯಲಿದೆ.ಸಂಜೆ 3 ರಿಂದ ಶ್ರೀ ಶಾರದ ಅಂಧರ ಶೃಂಗೇರಿ ಗೀತ-ಗಾನ ಕಾಲ ಸಂಘದಿಂದ ರಸಮಂಜರಿ ಮಹಾಪೂಜೆ ನಡೆಯಲಿದೆ.

ಸಂಜೆ 6-30ಕ್ಕೆ ವಿಘ್ನ ವಿನಾಶಕನ ವರ್ಣರಂಜಿತ ಶೋಭಾಯಾತ್ರೆ ನಡೆಯಲಿದೆ.ರಾತ್ರಿ 8 ರಿಂದ ಕಲರ್ಸ್ ಕನ್ನಡ ಎದೆ ತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ಹಾಗೂ ಬಳಗದವರಿಂದ ಭಕ್ತಿ ಗಾನಾಮೃತ ನಡೆಯಲಿದೆ. ಶೋಭಾಯಾತ್ರೆಯ ಸಮಯದಲ್ಲಿ ಭಜನಾ ತಂಡಗಳಿಂದ ಭಜನೆ, ಚೆಂಡೆ, ನಾಸಿಕ್ ಬ್ಯಾಂಡ್, ಟ್ಯಾಬ್ಲೊ, ಕೀಲುಕುದುರೆ ಹಾಗೂ ಸುಡುಮದ್ದು ಪ್ರದರ್ಶನ ನಡೆಯಲಿದೆ.

LEAVE A REPLY

Please enter your comment!
Please enter your name here