
ಧರ್ಮಸ್ಥಳ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 16ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಆ. 24ರಂದು ಎರ್ಮುಂಜೆ ಬೈಲ್ ನಾರ್ಯ ವಠಾರದಲ್ಲಿ ನಡೆಯಿತು.
ಉದ್ಘಾಟನೆಯನ್ನು ಕನ್ಯಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಸಂಯೋಜಕ ರಾಜೇಂದ್ರ ಅಜ್ರಿ ನೆರವೇರಿಸಿ ಶುಭ ಹಾರೈಸಿದರು. ಕೃಷಿಕ ರಮೇಶ್ ಹೆಚ್ ಹಿಪ್ಪ, ನಾರ್ಯ ವಿಜಯ ಶೆಟ್ಟಿ , ಹಾಗೂ ಉತ್ಸವದ ಅಧ್ಯಕ್ಷ ಪ್ರಸಾದ್ ನಾರ್ಯ ಉಪಸ್ಥಿತರಿದ್ದರು.

ಸಂಜೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳ ಬೊಳ್ಮಾ ಸ್ವಾತಿ ರೆಸಿಡೆನ್ಸಿ ಲ| ಪ್ರಭಾಕರ ಗೌಡ ವಹಿಸಿ ಮಾತನಾಡಿ ಕಾರ್ಯಕ್ರಮವನ್ನು ಸಂಯೋಜಿಸುವುದು, ತುಂಬಾ ಕಷ್ಟದ ಕೆಲಸ, ಕಾರ್ಯಕ್ರಮವನ್ನು ಆಯೋಜನೆ ಮಾಡಬೇಕಾದರೆ ಮೂಲಸೌಕರ್ಯಗಳನ್ನು ರೂಪಿಸಿಕೊಂಡು ಮಾಡಬೇಕಾಗುತ್ತದೆ ಇಲ್ಲಿ ಯಾವುದೇ ವ್ಯವಸ್ಥೆ ಇರುವುದಿಲ್ಲ ಎಂದು ಸಂಘಟನೆಯನ್ನು ಸ್ಲಾಗಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೇತ್ರಾವತಿ ಪಾರಿಜಾತ ಇನ್ ಮಾಲೀಕ ಲ| ಅಖಿಲೇಶ್ ಶೆಟ್ಟಿ ಮಾತನಾಡಿ ಶ್ರೀ ಕೃಷ್ಣ ಮನುಷ್ಯನಾಗಿ ಹುಟ್ಟಿದರೂ ಕೂಡ ನಾವು ದೇವರಾಗಿ ಕಾಣುತ್ತೇವೆ ಅದೇ ರೀತಿ ನಾವು ಕೂಡ ನಮ್ಮ ಮನಸ್ಸಿನ ಒಳಗಿನ ಕೃಷ್ಣನನ್ನು ಜಾಗೃತಿಗೊಳಿಸಿ ನಾವು ಕೂಡ ಜನರಿಗೆ ಒಳ್ಳೆಯ ಗೆಳೆಯರಾಗಿ, ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ, ಉತ್ತಮ ಮಾರ್ಗದರ್ಶಕರಾಗಿ ನಾವು ಕೂಡ ಸಮಾಜದಲ್ಲಿ ಒಳ್ಳೆಯ ಜನ ಆಗಿ ಬೆಳೆಯಬೇಕು, 16 ವರ್ಷಗಳಿಂದ ನಡೆದುಕೊಂಡು ಬರುವ ಉತ್ಸವ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಧರ್ಮಸ್ಥಳ ಗ್ರಾಮ ಪಂಚಾಯಿತಿ ಸದಸ್ಯರಾದ ಸುಧಾಕರ್ ಗೌಡ, ರೇವತಿ ಪದ್ಮ ಗೌಡ ಹಿಪ್ಪ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಪ್ರಸಾದ್ ಉಪಸ್ಥಿತರಿದ್ದರು. ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಜೀವಿತ್ ಮೇಲಿನ ಹಿಪ್ಪ, ನಿರೀಕ್ಷ ಕುಮಾರಿ ಮಲ್ಯಾಳ ಮತ್ತು ಅಶ್ವಿತಾ ಕಲ್ಕಜೆ ಅವರನ್ನು ಸನ್ಮಾನಿಸಲಾಯಿತು.

ಅನಾರೋಗ್ಯದ ಕಾರಣ ಕನ್ಯಾಡಿ ಕೇಶವ ಮುಗೇರ ಅವರಿಗೆ ಧನ ಸಹಾಯ ನೀಡಲಾಯಿತು. ಉತ್ಸವದ ಕಾರ್ಯದರ್ಶಿ ಸುಂದರ ಹಿಪ್ಪ, ಖಜಾಂಚಿ ಜಗದೀಶ್ ಆನೆಕ್ಕಲ, ಜೋತೆ ಕಾರ್ಯದರ್ಶಿ ಪ್ರದೀಪ್ ಬರಮೇಲು, ಸಹಕರಿಸಿ ಜಯನಂದ್ ಮಲ್ಯಾಳ ಸ್ವಾಗತಿಸಿ, ಸಂತೋಷ್ ಪುದುವೆಟ್ಟು ನಿರೂಪಿಸಿ, ವಂದಿಸಿದರು.