ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಭೇಟಿ-ನವವಿವಾಹಿತರಾದ ಮಿಹಿರ್-ಅನುಪಮಾ ದಂಪತಿಗೆ ಶುಭ ಹಾರೈಕೆ

0

ಉಜಿರೆ: ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕರ ಮಗಳು ಅನುಪಮಾ ಹಾಗೂ ಖ್ಯಾತ ವಕೀಲ ದನಂಜಯ್ ರಾವ್ ರವರ ಮಗ ಮಿಹಿರ್ ರವರ ವಿವಾಹ ಹಿನ್ನಲೆಯಲ್ಲಿ ನ.28ರಂದು ಉಜಿರೆಯ ಪ್ರತಾಪ ಸಿಂಹ ನಾಯಕ್ ರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಭೇಟಿ‌ ನೀಡಿ ನವವಿವಾಹಿತರಿಗೆ ಶುಭ ಹಾರೈಸಿದರು.

ಈ ವೇಳೆ, ಶಾಸಕ ಹರೀಶ್ ಪೂಂಜ, ಸಂಸದ ಬ್ರಿಜೇಶ್ ಚೌಟ, ವಿ.ಪ.ಸದಸ್ಯ ಡಾ.ಧನಂಜಯ ಸರ್ಜಿ, ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಬೆಳ್ತಂಗಡಿ ಮಂಡಲಾಧ್ಯಕ್ಷ ಶ್ರೀನಿವಾಸ್ ರಾವ್, ಉಜಿರೆ ಗ್ರಾ.ಪಂ.ಅಧ್ಯಕ್ಷೆ ಉಷಾಕಿರಣ್ ಕಾರಂತ್, ಉಪಾಧ್ಯಕ್ಷ ರವಿಕುಮಾರ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಉದ್ಯಮಿಗಳಾದ ರಾಜೇಶ್ ಪೈ, ಲಕ್ಷ್ಮಣ ಸಪಲ್ಯ, ಭರತ್, ರವಿಚಕ್ಕಿತ್ತಾಯ, ಉಜಿರೆ ಮಾಜಿ ಗ್ರಾ.ಪಂ.ಅಧ್ಯಕ್ಷೆ ಪುಪ್ಷವತಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಭೇಟಿಯ ವೇಳೆ ಉಜಿರೆಯಲ್ಲಿ ಸ್ಥಳಾಂತರಗೊಂಡು ಉದ್ಘಾಟನೆಗೊಂಡ ರಮ್ಯ ಒನ್ ಗ್ರಾಂ ಗೋಲ್ಡ್ ಮಳಿಗೆಗೆ ಭೇಟಿ ನೀಡಿದರು. ತದ‌ ಬಳಿಕ ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡಿ, ಗೌರವ ಸ್ವೀಕರಿಸಿದರು.

LEAVE A REPLY

Please enter your comment!
Please enter your name here