ಕಳೆಂಜ: ಸದಾಶಿವೇಶ್ವರ ದೇವಸ್ಥಾನದ ಗದ್ದೆಯಲ್ಲಿ ಬೆಳೆದಿರುವ ತೆನೆಗೆ ಬಾರಿ ಬೇಡಿಕೆ: ದ.ಕ. ಹಾಗೂ ಕಾಸರಗೋಡು ಜಿಲ್ಲೆಗಳ ದೇವಸ್ಥಾನಗಳಿಂದ ತೆನೆ ಹಬ್ಬದ ಸಲುವಾಗಿ ಹೆಚ್ಚಿದ ಬೇಡಿಕೆ

0

ಕಳೆಂಜ: ಚೌತಿ ಹಬ್ಬದ ಸಲುವಾಗಿ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ತೆನೆ ಹಬ್ಬ ಇರುವುದರಿಂದ ಮತ್ತು ದೇವಸ್ಥಾನಗಳಲ್ಲಿ ಪೂಜಿಸಲ್ಪಟ್ಟ ತೆನೆಯನ್ನು ಮನೆಯಲ್ಲಿ ಕಟ್ಟುವುದು ವಾಡಿಕೆ ಇದ್ದು ಗದ್ದೆ ನಾಟಿ ಮಾಡುವವರು ಕಡಿಮೆ ಇರುವುದರಿಂದ ಎಲ್ಲಾ ಕಡೆಯಿಂದಲೂ ಕಳೆಂಜ ಸದಾಶಿವೇಶ್ವರ ದೇವಳದಲ್ಲಿ ಬೆಳೆದಿರುವ ತೆನೆ ಗೆ ಬಾರಿ ಬೇಡಿಕೆ ಇದ್ದು ಜಿಲ್ಲೆಯ ವಿವಿಧ 30ಕ್ಕು ಹೆಚ್ಚು ದೇವಾಲಯದಿಂದ ಬೇಡಿಕೆಯಿದೆ ಎಂದು ದೇವಾಲಯದ ಅಧ್ಯಕ್ಷ ಶ್ರೀಧರ್ ರಾವ್ ಕಾಯಡ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.

ಕೆಳೆದ ಕೆಲವು ತಿಂಗಳುಗಳ ಹಿಂದೆ ದೇವಳದ ಆವರಣದಲ್ಲಿ ಜೆಸಿಐ ಕೊಕ್ಕಡ ಕಪಿಲ ಘಟಕದ ಅಧ್ಯಕ್ಷ ಶೋಭ ಪಿ. ಅವರ ನೇತೃತ್ವದಲ್ಲಿ ಊರವರ ಸಹಯೋಗದೊಂದಿಗೆ ನೇಜಿ ನಾಟಿಯನ್ನು ಮಾಡಿದ್ದು ಇದೀಗ ಪೈರು ಬೆಳೆದು ನಿಂತಿದ್ದು ಇನ್ನಷ್ಟು ದೇವಾಲಯಗಳಿಂದ ತೆನೆಗೆ ಬೇಡಿಕೆ ಬರುತ್ತಿದೆ ಎಂದು ದೇವಳದ ಅಧ್ಯಕ್ಷರು ತಿಳಿಸಿದ್ದಾರೆ.

ಆ. 25ರಂದು ಪುತ್ತೂರು ತಾಲೋಕು ಕೊಡಿಪ್ಪಾಡಿ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ತೆನೆ ವಿತರಣೆಯನ್ನು ದೇವಳದ ಅಧ್ಯಕ್ಷ ಶ್ರೀಧರ್ ರಾವ್ ಕಾಯಡ, ಕಾರ್ಯದರ್ಶಿ ಕುಸುಮಾಕರ ಕೊತ್ತೋಡಿ ಖಜಾoಚಿ ನಿರಂಜನ ಗೌಡ ಬದಿಮಾರು ಅವರು ಕೊಡಿಪ್ಪಾಡಿ ದೇವಳದ ಅಧ್ಯಕ್ಷ ಜನಾರ್ಧನ್ ಭಟ್ ರವರಿಗೆ ವಿತರಿಸಿದರು.

LEAVE A REPLY

Please enter your comment!
Please enter your name here