
ಬೆಳಾಲು: ಗ್ರಾಮದ ಕ್ರೀಡಾಭಿಮಾನಿಗಳಿಗಾಗಿ ‘ಸಿಂಧೂರ ಸ್ಫೋರ್ಟ್ಸ್ ಕ್ಲಬ್ ‘ ರಚನೆಗೊಂಡಿದೆ. ಹಾಗೂ ಆ. 29ರಂದು ರಾಷ್ಟ್ರೀಯ ಕ್ರೀಡಾ ದಿನದ ಪ್ರಯುಕ್ತ ಬೆಳಾಲು ಗ್ರಾಮಸ್ಥರಿಗಾಗಿ ವಯೋಮಾನಕ್ಕನುಗುಣವಾಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಗುಡ್ಡಗಾಡು ಸ್ಪರ್ಧೆಯನ್ನು ಆ. 31ರಂದು ಬೆಳಿಗ್ಗೆ 7:30ಕ್ಕೆ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಆಯೋಜನೆ ಮಾಡಲಾಗಿದೆ .
‘ ಸಿಂಧೂರ ಸ್ಪೋರ್ಟ್ಸ್ ಕ್ಲಬ್ ‘ನ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಅರಿಕೊಡಿಯ ಧರ್ಮದರ್ಶಿ ಹರೀಶ್ ಅರಿಕೋಡಿ ಮಾಡಲಿದ್ದಾರೆ.
ಸ್ಪರ್ಧೆಗಳು: 14ರ ವಯೋಮಾನಕ್ಕಿಂತ ಕೆಳಗೆ ಬಾಲಕ ಬಾಲಕಿಯರಿಗೆ, 15 ರಿಂದ 17ರ ವಯೋಮಾನದ ಬಾಲಕ ಬಾಲಕಿಯರಿಗೆ, 18ರಿಂದ 30ರ ವಯೋಮಾನದ ಪುರುಷರಿಗೆ ಹಾಗೂ ಮಹಿಳೆಯರಿಗೆ , 31 ರಿಂದ 45ರ ವಯೋಮಾನದವರೆಗೆ ಪುರುಷರಿಗೆ ಹಾಗೂ ಮಹಿಳೆಯರಿಗೆ , 45 ವರ್ಷ ಮೇಲ್ಪಟ್ಟ ಪುರುಷರಿಗೆ ಹಾಗೂ ಮಹಿಳೆಯರಿಗೆ ಸ್ಪರ್ಧೆಗಳು ನಡೆಯಲಿದೆ.
ವಿಜೇತರಿಗೆ ಪ್ರಥಮ ರೂ 1000 , ದ್ವಿತೀಯ ರೂ.750, ತೃತಿಯ ರೂ 500 ರೊಂದಿಗೆ ಶಾಶ್ವತ ಫಲಕ ಹಾಗೂ ಪ್ರಮಾಣ ಪತ್ರ ಮತ್ತು 4ನೇ, 5ನೇ, 6ನೇ ಸ್ಥಾನದವರಿಗೆ ಶಾಶ್ವತ ಫಲಕ ಮತ್ತು ಪ್ರಮಾಣ ಪತ್ರ.ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.