
ಉಜಿರೆ: ಬದನಾಜೆ ಸ.ಉ.ಪ್ರಾ.ಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವದ ದ್ವಜಾರೋಹಣೆಯನ್ನು
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅನಿಲ್ ಡಿ ‘ ಸೋಜಾ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಹಿರಿಯರಾದ ನಿವೃತ್ತ ಶಿಕ್ಷಕ ಬಾಬು ಗೌಡ, ಉಜಿರೆ ಮಹಾವೀರ ಸಿಲ್ಕ್ ನ ಪುನೀತ ಪ್ರಭಾಕರ್, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಯುವಕ ಮಂಡಲದ ಸದಸ್ಯರು, ಸುಜ್ಞಾನ ನಿಧಿ ಯೋಜನೆಯ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ನ ಸದಸ್ಯರು, ಪೋಷಕರು ಭಾಗವಹಿಸಿದರು.
ಮಹಾವೀರ ಸಿಲ್ಕ್ ನ ಮಾಲಕರಿಂದ ಶಾಲಾ ಬಿಸಿ ಊಟದ ಕಾರ್ಯಕ್ರಮಕ್ಕೆ ಗ್ರೈಂಡರ್ ನ್ನು ಉದಾರವಾಗಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ನಿರಂಜನ ಸ್ವಾಗತಿಸಿದರು. ಜಯಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಶಿಕ್ಷಕಿ ಲಲಿತ ಕುಮಾರಿ ವಂದಿಸಿದರು.