
ಆರಂಬೋಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಗಳತೇರು ಇಲ್ಲಿ ನಡೆದ ಬಜಿರೆ, ನಿಟ್ಟಡೆ, ಪಡ್ಡಂದಡ್ಕ ವಲಯ ಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ವಿದ್ಯಾರ್ಥಿಗಳು ಬಾಲಕ ಹಾಗೂ ಬಾಲಕಿಯರ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕೆ ಆಯ್ಕೆಯಾಗಿರುತಾರೆ.
ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಮೆಟಿಲ್ದಾ ಡಿ ಸೋಜಾ ಅವರು ತರಬೇತಿ ನೀಡಿರುತಾರೆ. ಶಾಲಾ ಮುಖ್ಯ ಶಿಕ್ಷಕಿ ಸುಮಿತ್ರ ಎಸ್. ಹಾಗೂ ಶಿಕ್ಷಕ ವೃಂದ ಸಹಕಾರ ನೀಡಿರುತ್ತಾರೆ.